Site icon PowerTV

ಗ್ರಾ.ಪಂ ಕಚೇರಿಯಲ್ಲಿ ಸದಸ್ಯರ ಮಾರಾಮಾರಿ!: ಚುನಾವಣೆ ಮುಂದೂಡಿಕೆ

ಮಂಡ್ಯ : ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ಪಂಚಾಯ್ತಿ ಸದಸ್ಯರ ನಡುವೆ ಕಚೇರಿಯಲ್ಲೇ ಮಾರಾಮಾರಿ ಹೊಡೆದಾಟ ನಡೆದಿರುವ ಘಟನೆ ಮಂಡ್ಯ ತಾಲ್ಲೂಕಿನ ಹಲ್ಲೆಗೆರೆ ನಡೆದಿದೆ.

ಇದನ್ನು ಓದಿ: ಕೇರಳ ಹೆಸರು ಬದಲಾವಣೆಗೆ ಎಡರಂಗ ಪಕ್ಷ ನಿರ್ಣಯ ಮಂಡನೆ!

ಹಲ್ಲೆಗೆರೆ  ಗ್ರಾಮ ಪಂಚಾಯ್ತಿಯ 2ನೇ ಅವಧಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗು ಉಪಾಧ್ಯಕ್ಷ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯರ ನಡುವೆ  ತಳ್ಳಾಟ, ತೂರಾಟ,  ನೂಕಾಟ, ನಡೆದಿದ್ದು ಗಲಾಟೆ ವಿಕೋಪಕ್ಕೆ ತಿರುಗಿ ಹೊಡೆದಾಟಕ್ಕೆ ಇಳಿದಿದ್ದಾರೆ.

ಪಂಚಾಯ್ತಿಯ ಕಾಂಗ್ರೆಸ್‌-ಜೆಡಿಎಸ್‌ ಬೆಂಬಲಿತ ಸದಸ್ಯರ ನಡುವೆ ಘರ್ಷಣೆ ಉಂಟಾಗಿದ್ದು ಈ ವೇಳೆ  ಗಲಾಟೆ ಅತಿರೇಕಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡ ಹಿನ್ನೆಲೆ ಚುನಾವಣಾಧಿಕಾರಿಗಳು ಎರಡನೇ ಅವಧಿಗೆ ನಡೆಯುತ್ತಿರುವ ಅಧ್ಯಕ್ಷ ಹಾಗು ಉಪಾಧ್ಯಕ್ಚಷ ಚುನಾಣೆಯನ್ನು ಮುಂದಿನ ಆದೇಶದ ವರೆಗೆ ಮುಂದೂಡಿದ್ದಾರೆ.

Exit mobile version