Site icon PowerTV

ಮಂಡ್ಯದಲ್ಲಿ ಕಾಂಗ್ರೆಸ್ ಗೆದ್ದಿರೋದು HDK ಸಹಿಸಲು ಆಗುತ್ತಿಲ್ಲ : ಚಲುವರಾಯಸ್ವಾಮಿ

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಆರು ಸ್ಥಾನ ಗೆದ್ದಿರೋದು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಬಹುಶಃ ಮೈತ್ರಿ ಸರ್ಕಾರ ಬರುತ್ತದೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಆದರೆ ಇವಾಗ ನನ್ನನ್ನು‌ ಅವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕೆ ಫಾರಿನ್ ಗೆ ಹೋಗಿದ್ದಾರೆ ಅನಿಸುತ್ತಿದೆ ಎಂದರು.

ನನ್ನ ವಿರುದ್ಧ ಪತ್ರ ಬರೆದವನು ಯಾರು? ಮನೆ ಅಡ್ರೆಸ್ ಗೊತ್ತಾಗ್ತಿಲ್ಲ. ಪತ್ರದಲ್ಲಿ ಕುಮಾರಸ್ವಾಮಿ ನಮ್ಮ ನಾಯಕರು ಅಂತ ಉಲ್ಲೇಖ ಮಾಡಿದ್ದಾರೆ. ಹಾಗಾಗಿ ಈ ಪತ್ರವನ್ನು ಜನತಾದಳದವರೇ ಕ್ರಿಯೇಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ನಾನು ಒಕ್ಕಲಿಗ, ಅದಕ್ಕೆ ಎಚ್ ಡಿ ಕೆಗೆ ಸಹಿಸಲು ಆಗ್ತಿಲ್ಲ. ಎರಡು ಬಾರಿ ಸಿಎಂ ಆದವರು ಇಂತಹ ಕೆಳಮಟ್ಟಕ್ಕೆ ಇಳಿಯೋದು ಸಂಸ್ಕಾರ ಅಲ್ಲ. ಅವರ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು.‌ ಇದೆಲ್ಲಾ ಜಾಸ್ತಿ ದಿನ ನಡೆಯಲ್ಲ ಎಂದರು.

Exit mobile version