ಬೆಂಗಳೂರು : ಕಾನೂನು ಬಾಹಿರವಾಗಿ ಫ್ಲೆಕ್ಸ್ ಹಾಕುವಂತಿಲ್ಲ. ಹಾಕಿದ್ರೂ ತೆಗೆದುಹಾಕ್ತೀವಿ. ಫ್ಲೆಕ್ಸ್ ಹಾಕಿದ್ರೆ 50 ಸಾವಿರ ರೂಪಾಯಿ ದಂಡ ಹಾಕ್ತೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನದು, ಸಿಎಂ ಯಾರದ್ದೂ ಹಾಕುವಂತಿಲ್ಲ. ಸರ್ಕಾರದ್ದು ಹಾಕಬೇಕಾದ್ರೆ ಸೀಮಿತ ಅನುಮತಿ ಪಡೆಯುತ್ತೇವೆ. ಇದಕ್ಕೆ ಒಂದು ಪಾಲಿಸಿ ತರಲಾಗುವುದು ಎಂದಿದ್ದಾರೆ.
ಫ್ಲೆಕ್ಸ್ ಹಾಕಿರೋದನ್ನೂ ತೆಗೆದುಹಾಕಬೇಕು ಅಂತ ಸಲಹೆ ಬಂದಿದೆ. ಕಾನೂನು ಬಾಹಿರವಾಗಿ ಹೋರ್ಡಿಂಗ್, ಸ್ಟ್ರಕ್ಚರ್ ತೆಗೆಯಲು ಸೂಚಿಸಿದ್ದೇನೆ. ಆಡಳಿತ ಪಕ್ಷದ ಶಾಸಕರನ್ನು ಕರೆದು ಈಗಾಗಲೇ ಹೇಳಿದ್ದೇನೆ. ಮನವಿ ಮಾಡ್ತೀನಿ, ಹುಟ್ಟು, ಸಾವು, ಶುಭಾಶಯ ಕೋರುವುದು ಯಾರೂ ಕೂಡ ಮಾಡಬಾರದು. ಕಾರ್ಪೊರೇಷನ್ ಅವರು FIR ಫೈಲ್ ಮಾಡ್ತಾರೆ ಎಂದು ಖಡಕ್ ಆಗಿಯೇ ಹೇಳಿದ್ದಾರೆ.
134 ಕಂಪ್ಲೆಂಟ್, 40 FIR
ಧಾರ್ಮಿಕ, ರಾಜಕೀಯ, ಸಾಮಾಜಿಕ ಯಾವುದೇ ವಿಚಾರಕ್ಕೂ ಅನುಮತಿ ಇಲ್ಲ. ನಾನು ಮಂತ್ರಿಯಾದ ಕೂಡಲೇ ಇದನ್ನು ಘೋಷಣೆ ಮಾಡಬೇಕಿತ್ತು. ಆದ್ರೆ, ಕೆಲ ಸಮಸ್ಯೆ ಇತ್ತು. ಹಾಗಾಗಿ, ಈಗ ನಿರ್ಧಾರ ತೆಗೆದುಕೊಂಡಿದ್ದೇನೆ. 58 ಸಾವಿರ ಕಾನೂನು ಬಾಹಿರ ಫ್ಲೆಕ್ಸ್ ತೆರವು ಮಾಡಲಾಗಿದೆ. 134 ಕಂಪ್ಲೆಂಟ್, 40 FIR ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ನಮಗೆ ಅಸಹ್ಯ ಆಗ್ತಿದೆ. ಯಾವುದೇ ಪಕ್ಷ ಇದ್ರೂ ಸರಿ. ಕೋರ್ಟ್ ಆದೇಶ ಕೂಡ ಇದೆ. ಆಗಸ್ಟ್ 15ರ ಒಳಗೆ ಫ್ಲೆಕ್ಸ್ ಬ್ಯಾನ್ ಮಾಡಲಾಗುವುದು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.


