Site icon PowerTV

ಪತ್ನಿ ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ಪತಿ

ಮೈಸೂರು : ಮನೆಯಿಂದ ಹೊರಹೋದ ಗೃಹಿಣಿ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಮೈಸೂರಿನ ನರಸೀಪುರ ಪಟ್ಟಣದ ವಿಶ್ವಕರ್ಮ ಬೀದಿಯಲ್ಲಿ ನಡೆದಿದೆ.

ವಿಶ್ವಕರ್ಮ ಬೀದಿಯ ಶಿವಮಣಿ ಎಂಬಾಕೆ ಕಾಣೆಯಾಗಿರುವ ಗೃಹಿಣಿಯಾಗಿದ್ದು, ಜುಲೈ 30 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಹೊರ ಹೋದವರು ಇಲ್ಲಿಯ ತನಕ ಪತ್ತೆಯಾಗಿಲ್ಲ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿಶ್ವಕರ್ಮ ಬೀದಿಯ ಶ್ರೀನಿವಾಸ್ ಹಾಗೂ ಶಿವಮಣಿ ವಿವಾಹವಾಗಿದ್ದರು. ಇದೀಗ ಒಂದು ವಾರ ಕಳೆದರು ಶಿವಮಣಿ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ, ಪತ್ನಿ ಹುಡುಕಿಕೊಡುವಂತೆ ನರಸೀಪುರ ಪೋಲೀಸ್ ಠಾಣೆಗೆ ಪತಿ ಶ್ರೀನಿವಾಸ್ ದೂರು ನೀಡಿದ್ದಾರೆ. ಈ ಸಂಬಂಧ ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version