Site icon PowerTV

ಸ್ಪಂದನಾ ಸಾವು : ವೈದ್ಯರ ವರದಿ ಬರುವವರೆಗೂ ಊಹಾಪೋಹಕ್ಕೆ ಎಡೆಮಾಡಿಕೊಡಬೇಡಿ

ಬೆಂಗಳೂರು: ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ಸಂಬಂಧಿಸಿ ಅಟಾಪ್ಸಿ ವರದಿ ಬರುವವರೆಗೂ ಸಾರ್ವಜನಿಕರು ಯಾವುದೇ ಊಹಾಪೋಹದ ವರದಿಗಳನ್ನು ಪ್ರಸಾರ ಮಾಡದಂತೆ ಕಾಂಗ್ರೆಸ್​ ಹಿರಿಯ ರಾಜಕಾರಣಿ ಹಾಗು ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್​ ಮನವಿ ಮಾಡಿಕೊಂಡರು.

ಇದನ್ನೂ ಓದಿ: ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ಡಿಸಿಎಂ ಡಿಕೆಶಿ ಸಂತಾಪ!​

ನಗರದಲ್ಲಿ ಮಾತನಾಡಿದ ಅವರು, ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ, ಅವರ ಕಸಿನ್ಸ್​ ಜೊತೆಗೆ ಯೋರೋಪ್​ ಪ್ರವಾಸಕ್ಕೆ ತೆರಳಿದ್ದು, ಬ್ಯಾಂಕಾಕ್​ನಲ್ಲಿ ಹೃದಯಾಘಾತವಾಗಿರುವ ಕುರಿತು ನೆನ್ನೆ ಸಂಜೆಯೇ ಮಾಹಿತಿ ಬಂದಿದೆ.

ವಿಚಾರ ತಿಳಿಯುತ್ತಿದ್ದಂತೆ ಶೂಟಿಂಗ್​ ಮುಗಿಸಿ ನಟ ವಿಜಯ್​ ರಾಘವೇಂದ್ರ ಬ್ಯಾಂಕಾಕ್ ತೆರಳಿದ್ದಾರೆ. ವೈದ್ಯರ ವರದಿ ಬರುವವರೆಗೂ ಸಾರ್ವಜನಿಕರು ಹಾಗೂ ಮಾದ್ಯಮದವರು ಯಾವುದೇ ಊಹಾಪೋಹಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.

ನಾಳೆ ಪಾರ್ಥೀವ ಶರೀರ ಬೆಂಗಳೂರಿಗೆ ಬರಲಿದ್ದು ಶವ ಸಂಸ್ಕಾರದ ವಿಚಾರವಾಗಿ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಲ್ಲಾ ವಿಚಾರಗಳು ನಾಳೆ ತಿಳಿಯಲಿದೆ ಎಂದು ಅವರು ಹೇಳಿದರು.

Exit mobile version