Site icon PowerTV

ಬೆಂಗಳೂರಿನಲ್ಲಿ ಹಿಟ್​ & ರನ್​ ಕೇಸ್​: ಅಪ್ಪ-ಮಗ ಸಾವು!

ಬೆಂಗಳೂರು : ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಆಟೋ ಮತ್ತು ಡಿಯೋ ಗಾಡಿಗೆ​ ಡಿಕ್ಕಿ ಹೊಡೆದ ಪರಿಣಾಮ ಅಪ್ಪ, ಮಗ ಸಾವಿಗೀಡಾಗಿದ್ದು ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಭಾನುವಾರ ತಡರಾತ್ರಿ ಇಸ್ರೋ ಸರ್ಕಲ್​ ಬಳಿ ಘಟನೆ ನಡೆದಿದೆ.

ಇದನ್ನೂ ಓದಿ: ದೇವಾಲಯದ ಗೋಡೆ ಹಾನಿ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್​ ದಾಖಲಿಸಿದ ಶಾಸಕ

ಅಪ್ಪ ರಘು, ಮಗ ಚಿರಂಜೀವಿ ಸ್ಥಳದಲ್ಲೇ ಸಾವಿಗೀಡಾದ ದುರ್ಧೈವಿಗಳು, ಅಪಘಾತದಲ್ಲಿ ಗಂಭೀರ ಗಾಯಗಳಾಗಿದ್ದ ಅಳಿಯ ವಾಸುವನ್ನು ಆಸ್ಪತ್ರೆ ದಾಖಲಿಸಲಾಗಿದ್ದು ಈತನ  ಸ್ಥಿತಿ ಚಿಂತಾಜನಕವಾಗಿದೆ.

ಭಾನುವಾರ ತಡರಾತ್ರಿ ಮಾಗಡಿ ಜಿಲ್ಲಾ ಪಂಚಾಯತಿ ಸದಸ್ಯರ ಮಗ ಆಕಾಶ್  ಸೇರಿದಂತೆ ಮೂವರು, ಕುಡಿದ ಮತ್ತಿನಲ್ಲಿ ಮಾರುತಿ ಇಕೋ ಕಾರನ್ನು M.S.ರಾಮಯ್ಯ ಆಸ್ಪತ್ರೆ ಕಡೆಯಿಂದ ಅಡ್ಡಾದಡ್ಡಿಯಾಗಿ ಚಲಾಯಿಸಿದ್ದಾರೆ, ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಮೊದಲು ಡಿಕ್ಕಿ ಹೊಡೆದ ಕಾರು, ಬಳಿಕ ಆಟೋ, ಡಿಯೋ ಸ್ಕೂಟರ್​ಗೆ ಡಿಕ್ಕಿಯಾಗಿದೆ.

ಘಟನೆ ಬಳಿಕ ಇಲ್ಲಿನ ಸ್ಥಳೀಯರು  ಕಾರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಕಾರಿನ ಸಹಿತ ಪರಾರಿಯಾಗಿದ್ದು ಆಕಾಶ್​ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಘಟನೆಯೂ ಸದಾಶಿವ ನಗರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version