Site icon PowerTV

ರಾಜಾರೋಷವಾಗಿ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಹಣ ವಸೂಲಿ

ಬಾಗಲಕೋಟೆ : ‘ಗೃಹಲಕ್ಷ್ಮೀ’ ಯೋಜನೆಗೆ ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳಲಾಗುತ್ತೆ ಅಂತ ಸರ್ಕಾರ ತಿಳಿಸಿದೆ. ಆದ್ರೆ, ಸರ್ಕಾರದ ಮಾತಿಗೂ ಕೇರ್‌ ಮಾಡದೇ ಜನರಿಂದ ರಾಜಾರೋಷವಾಗಿ ಅರ್ಜಿ ಸಲ್ಲಿಕೆಗೆ ಹಣ ಪಡೆಯಲಾಗ್ತಿದೆ.

ಬಾಗಲಕೋಟೆಯ ಮಹಾಲಿಂಗಾಪುರ ಪಟ್ಟಣದ ಎಪಿಎಂಪಿ ಬಳಿ ಇರುವ ಕರ್ನಾಟಕ ಒನ್‌ ಕೇಂದ್ರದಲ್ಲಿ ಈ ವಸೂಲಿ ದಂಧೆ ನಡೆಯುತ್ತಿದೆ. ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲಿರುವ ಬರುವ ಫಲಾನುಭವಿಗಳಿಂದ ತಲಾ 50 ರೂಪಾಯಿಯನ್ನ ವಸೂಲಿ ಮಾಡಲಾಗ್ತಿದೆ.

ಕರ್ನಾಟಕ ಒನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಉಚಿತ ಇಲ್ಲ. ಹೀಗಾಗಿ, ನೀವೆಲ್ಲರೂ 50 ರೂಪಾಯಿ ಕೊಡಬೇಕು ಅಂತ ಸಿಬ್ಬಂದಿ ಹೇಳ್ತಿದ್ದಾರಂತೆ. ಇನ್ನು ಜನರಿಂದ ಹಣ ಪಡೆಯುವ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಚಿತವಿದ್ರೂ ಹಣ ಪಡೆಯುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಫಲಾನುಭವಿಗಳು ಆಗ್ರಹಿಸಿಸುತ್ತಿದ್ದಾರೆ.

Exit mobile version