Site icon PowerTV

ಡಿಜಿಟಲ್ ವೈಯಕ್ತಿಕ ಮಾಹಿತಿ ಮಸೂದೆ ಅಂಗೀಕಾರ

ನವದೆಹಲಿ : ಲೋಕಸಭೆಯಲ್ಲಿ ಇಂದು ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ 2023 ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ಮಸೂದೆ ಅಂಗೀಕಾರವಾಗಿದೆ. ದತ್ತಾಂಶ ಸಂರಕ್ಷಣೆ, ಡೇಟಾ ಹಂಚಿಕೆ ಮತ್ತು ಡೇಟಾ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಈ ವಿಧೇಯಕದಲ್ಲಿ ರೂಪಿಸಲಾಗಿದೆ.

ಮಸೂದೆಯನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ವಿಪಕ್ಷಗಳು ಮಸೂದೆ ಬಗ್ಗೆ ಚರ್ಚಿಸಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಯಾವುದೇ ವಿರೋಧ ಪಕ್ಷದ ನಾಯಕ ಅಥವಾ ಸದಸ್ಯರಿಗೆ ಜನರ ವೈಯಕ್ತಿಕ ಡೇಟಾದ ರಕ್ಷಣೆಯಂತಹ ವಿಷಯಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.

ವ್ಯಾಪಕ ಸಾರ್ವಜನಿಕ ಸಮಾಲೋಚನೆಯ ನಂತರ ಈ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.

Exit mobile version