Site icon PowerTV

ಎದೆ ಝಲ್ ಎನಿಸುವ ದೃಶ್ಯ : ಕಾರು ಜಲಪಾತಕ್ಕೆ ಉರುಳಿ ಬಿದ್ದ ವಿಡಿಯೋ ವೈರಲ್

ಬೆಂಗಳೂರು : ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರವಾಸಕ್ಕೆಂದು ತೆರಳಿದವರ ಕಾರು ಅಪಘಾತಕ್ಕೀಡಾಗಿದೆ. ಈ ದೃಶ್ಯ ಎದೆ ಝಲ್ ಎನಿಸುವಂತಿದೆ.

ಕೆಂಪು ಬಣ್ಣದ ಕಾರು ಜಲಪಾತಕ್ಕೆ ಉರುಳಿ ಬಿದ್ದ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಭಾನುವಾರ ಸಂಜೆ ಇಂದೋರ್‌ನ ಲೋಧಿಯಾ ಕುಂಡ್‌ನಲ್ಲಿ ಈ ಘಟನೆ ಸಂಭವಿಸಿದೆ.

ಪಿಕ್ನಿಕ್ ಬಂದಿದ್ದ ಕುಟುಂಬದವರು ಕಾರನ್ನು ಜಲಪಾತದ ಬದಿಯಲ್ಲಿ ನಿಲಿಸಿದ್ದಾರೆ. ವಾರಾಂತ್ಯವಾದ ಕಾರಣ ಅನೇಕ ಪ್ರವಾಸಿಗರು ಮೋಜು-ಮಸ್ತಿ ಮಾಡಲು ಪ್ರವಾಸಿ ತಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆ ಕಾರು ನೀರಿನೊಳಗೆ ಉರುಳಿ ಬಿದ್ದಿದೆ.

ಆಕಸ್ಮಿಕವಾಗಿ ಜಲಪಾತಕ್ಕೆ ಉರುಳಿ ಬಿದ್ದ ಕಾರು ನೀರಿನಲ್ಲಿ ಮುಳುಗುವ ಮುನ್ನ ಸ್ಥಳೀಯರು ಕಾರಿನಲ್ಲಿದ್ದ ಕುಟುಂಬಸ್ಥರನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಘಟನೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ.

Exit mobile version