Site icon PowerTV

ಬೊಮ್ಮಾಯಿ ದಿಢೀರ್​ ದೆಹಲಿ ಪ್ರವಾಸ : ಕುತುಹಲ ಮೂಡಿಸಿದ ಅಮಿತ್​ ಷಾ ಭೇಟಿ!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಜೆಪಿ ವರಿಷ್ಟರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದು, ವಿಪಕ್ಷ ನಾಯಕನ ಆಯ್ಕೆ ಕುರಿತು ರಾಜ್ಯ ಕೇಸರಿ ಪಾಳಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಹಿಟ್​ & ರನ್​ ಕೇಸ್​: ಅಪ್ಪ-ಮಗ ಸಾವು!

ರಾಜ್ಯದಲ್ಲಿ ನೂತನ ಸರ್ಕಾರ ಬಂದು 3 ತಿಂಗಳು ಕಳೆಯುತ್ತಾ ಬಂದಿದ್ದರು ಇರುವರೆಗೂ ವಿಪಕ್ಷ ನಾಯಕ ಆಯ್ಕೆ ವಿಚಾರ ಬಿಜೆಪಿ ವರಿಷ್ಟರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್​  ಷಾ ಕಛೇರಿಯಿಂದ ಬಸವರಾಜ್ ಬೊಮ್ಮಾಯಿಯವರಿಗೆ ಕರೆ ಬಂದ ಬೆನ್ನಲ್ಲೇ ಇಂದು ದೆಹಲಿ ಪ್ರಯಾಣ ಬೆಳೆಸಿರುವುದು. ವಿರೋಧ ಪಕ್ಷದ ನಾಯಕನ ಆಯ್ಕೆಯ ಕಸರತ್ತು ಭರ್ಜರಿಯಾಗಿ ನಡೆದಿದೆ,

ರಾಜ್ಯ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಸಿಟಿ ರವಿ, ಆರ್​.ಅಶೋಕ್​, ಯತ್ನಾಳ್​, ಹಾಗು ಬಸವರಾಜ್ ಬೊಮ್ಮಾಯಿ ಹೆಸರುಗಳು ಇದ್ದವು, ಆದರೇ, ಆಯ್ಕೆ ಪ್ರಕ್ರಿಯೆ ವಿಳಂಭವಾಗುತ್ತಲೆ ಇತ್ತು. ಕೇಂದ್ರ ಗೃಹ ಸಚಿವ ಅಮಿತ್​ ಷಾ ಕಚೇರಿಯಿಂದ ಕರೆ ಬಂದ ಬೆನ್ನಲ್ಲೇ  ಇಂದು ಬಸವರಾಜ್ ಬೊಮ್ಮಾಯಿ ದಿಢೀರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.

ಇದರೊಂದಿಗೆ ಬೊಮ್ಮಾಯಿ ವಿಪಕ್ಷ ನಾಯಕರಾಗೋದು ಪಕ್ಕಾನಾ..? ಎನ್ನುವ ಕುತೂಹಲ ಮೂಡಿದ್ದು ಸದ್ಯದಲ್ಲೇ ಪ್ರತಿಪಕ್ಷ ನಾಯಕ ಹೆಸರು ಘೋಷಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Exit mobile version