Site icon PowerTV

ತಮ್ಮ ಅತ್ತಿಗೆ ನಿಧನಕ್ಕೆ ಕಂಬನಿ ಮಿಡಿದ ನಟ ಶ್ರೀಮುರಳಿ ಹೇಳಿದ್ದೇನು?

ಬೆಂಗಳೂರು: ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ತೀವ್ರ ಹೃದಯಾಘಾತದಿಂದ ಬ್ಯಾಂಕಾಕ್​ ನಲ್ಲಿ ನಿಧರಾಗಿದ್ದಾರೆ.

ಇದನ್ನು ಓದಿ: ಡಯೇಟ್​ ಮೊರೆ ಹೋಗಿದ್ದೆ ಸ್ಪಂದನಾ ಹೃದಯಾಘಾತಕ್ಕೆ ಕಾರಣವಾಯ್ತಾ!?

ತಮ್ಮ ಅತ್ತಿಗೆ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಮಲ್ಲೇಶ್ವರದಲ್ಲಿರುವ ಬಿ.ಕೆ ಶಿವರಾಂ ನಿವಾಸದ ಬಳಿ ಆಗಮಿಸಿದ ನಟ ಶ್ರೀಮುರಳಿ,  ಬಳಿಕ ಮಾದ್ಯಮ ಪ್ರತಿಕ್ರಿಯೆ ನೀಡಿದರು.

ಅಣ್ಣ ನನಗೆ ಫೋನ್​ ಮಾಡಿ, ಕಸಿನ್ಸ್‌ ಜೊತೆ ಅತ್ತಿಗೆ ವಿದೇಶಕ್ಕೆ ತೆರಳಿದ್ದರು, ಅಣ್ಣಾ ಶೂಟಿಂಗ್​ ಮುಗಿಸಿಕೊಂಡು ಜಾಯ್ನ್​ ಆಗಿದ್ದಾರೆ, ಈ ವೇಳೆ ನಿನ್ನೆ ಬಂದು ಮಲಗಿದ್ದವರು ಬಳಿಕ ಎದ್ದೇ ಇಲ್ಲ,  ಲೋ ಬಿಪಿ ಅಂದುಕೊಂಡಿದ್ದೆವು, ಆದ್ರೆ ಹೀಗಾಗಿದೆ .

ವಿಜಯ್​ ರಾಘವೇಂದ್ರ ಸಾವಿನ ವಿಚಾರ ತಿಳಿದು ವಿದೇಶಕ್ಕೆ ತೆರಳಿದ್ದಾರ ಅಥವಾ ಮೊದಲೇ ಹೋಗಿದ್ದರಾ ಎನ್ನುವ ಮಾದ್ಯಮ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಅತ್ತಿಗೆ ಸಾವಿನ ವಿಚಾರವಷ್ಟೆ ಮುಖ್ಯವಾಗಿರುವುದು ಇನ್ನುಳಿದ ವಿಚಾರ ನಾಳೆ ಮಾತನಾಡಿದರೇ ಉತ್ತಮ ಎಂದು ಅವರು ಹೇಳಿದರು.

Exit mobile version