Site icon PowerTV

ಕಿರುಕುಳ ತಾಳಲಾರದೇ SDA ಆತ್ಮಹತ್ಯೆ

ಚಿತ್ರದುರ್ಗ : ಡೆತ್​ನೋಟ್ ಬರೆದಿಟ್ಟು ಎಸ್​ಡಿಎ(SDA) ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯ ಎಸ್​ಡಿಎ(SDA) ಆಗಿರುವ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅಮಾನತು ಬೆದರಿಕೆ ಹಾಕಿದ್ದಾರೆ. ಹೊಳಲ್ಕೆರೆ ತಾಲೂಕು ಪಂಚಾಯಿತಿ ಇಓ(EO) ರವಿ, ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಕಿರುಕುಳ ನೀಡಿದ್ದಾರೆಂದು ಆರೋಪ ಮಾಡಲಾಗಿದೆ.

ನಿನ್ನೆ ಸೊಂಡೆಕೊಳ ಗ್ರಾಮದ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ತಿಪ್ಪೇಸ್ವಾಮಿ ಪುತ್ರ ರಾಜಶೇಖರಪ್ಪ ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಆದರೆ, ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾಲೂಕು ಪಂಚಾಯಿತಿ ಇಓ ರವಿ ಹೆಸರನ್ನ ಉಲ್ಲೇಖಿಸಿಲ್ಲ. ದೂರಿನಲ್ಲಿ ಕೇವಲ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಎಂಬುವರು ಕಿರುಕುಳ ನೀಡಿದ್ದಾರೆಂದು ಮಾತ್ರ ಉಲ್ಲೇಖಿಸಲಾಗಿದೆ.

Exit mobile version