Site icon PowerTV

ಉಡುಪಿ ಕಾಲೇಜು ಶೌಚಾಲಯ ಪ್ರಕರಣ: ತಪ್ಪು ಒಪ್ಪಿಕೊಂಡ ವಿದ್ಯಾರ್ಥಿನಿಯರು!

ಉಡುಪಿ : ಇಲ್ಲಿನ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ  ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಚಿತ್ರೀಕರಣ ಮಾಡಿರುವುದಾಗಿ ಮೂವರು ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನು ಓದಿ: ಪೊಲೀಸ್​ ಮಹಾನಿರ್ದೇಶಕರಾಗಿ ಅಲೋಕ್​ ಮೋಹನ್ ಮುಂದುವರಿಸಿ ಸರ್ಕಾರ ಆದೇಶ​!

ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉಡುಪಿ ಪ್ಯಾರಾ ಮೆಡಿಕಲ್​ ಕಾಲೇಜು ಪ್ರಕರಣದ ತನಿಖೆಯಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ, ಮೂವರು ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರ ಹಲವು ಸುತ್ತಿನ ವಿಚಾರಣೆ ಬಳಿಕ ವಿಡಿಯೋ ಚಿತ್ರೀಕರಣ ಮಾಡಿದ್ದನ್ನು ಮೂವರು ವಿದ್ಯಾರ್ಥಿನಿಯರು ಒಪ್ಪಿಕೊಂಡಿದ್ದಾರೆ.

ಶೌಚಾಲಯದ ಬಳಿ ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡಿರುವುದಾಗಿ ವಿಡಿಯೋ ಮಾಡಿ, ಬಳಿಕ ಡಿಲೀಟ್ ಮಾಡಿದ್ದೇವೆ ಎಂದು ವಿದ್ಯಾರ್ಥಿನಿಯರು ಸಮಾಜಾಯಿಷಿ ನೀಡಿದ್ದಾರೆ. ನಾವು ತಮಾಷೆಗೆಂದು ಬೇರೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಲು ಹೋಗಿ ಸಂತ್ರಸ್ತೆಯ ವಿಡಿಯೋ ಮಾಡಿದ್ದು ಬಳಿಕ ವಿಡಿಯೋ ಡಿಲೀಟ್​ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ಡಲೀಟ್ ಆಗಿರುವ ವಿಡಿಯೋ ರಿಟ್ರೈವ್ ಆದರೆ ಎಲ್ಲಾ ವಿಚಾರಗಳು ಗೊತ್ತಾಗುತ್ತೆ ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿನಿಯರು ವ್ಯಕ್ತಪಡಿಸಿದ್ದಾರೆ ಮತ್ತು ಎಫ್ ಎಸ್ ಎಲ್ ವರದಿಗೆ ಉಡುಪಿ ಪೊಲೀಸರು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

Exit mobile version