Site icon PowerTV

ಹೆಣ್ಣುಮಕ್ಕಳ ಶಿಕ್ಷಣ ಕಸಿದ ತಾಲಿಬಾನ್ ಸರ್ಕಾರ

ಬೆಂಗಳೂರು : ತಾಲಿಬಾನ್ ತನ್ನ ಕ್ರೂರ ನಿರ್ಧಾರಗಳಿಗಾಗಿ ಪ್ರಪಂಚದಾದ್ಯಂತ ಕುಖ್ಯಾತವಾಗಿದೆ. ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು ಎಂದು ತಾಲಿಬಾನ್ ಸರ್ಕಾರ ಹೊಸ ಆದೇಶ ಹೊರಡಿಸಿದೆ.

10 ವರ್ಷದ ನಂತರ ಹೆಣ್ಣುಮಕ್ಕಳು ಓದುವ ಹಕ್ಕನ್ನು ತಾಲಿಬಾನ್ ಸರ್ಕಾರ ಕಸಿದುಕೊಂಡಿದೆ. ಹೊಸ ಆದೇಶಕ್ಕೆ ಸುಮಾರು 223 ದಿನಗಳ ಮೊದಲು, ಹೆಣ್ಣುಮಕ್ಕಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವುದನ್ನು ನಿಷೇಧಿಸಲಾಯಿತು. ಈ ಹಿಂದೆ 6ನೇ ತರಗತಿವರೆಗೆ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಓದಲು ಅವಕಾಶವಿತ್ತು.

ತಾಲಿಬಾನ್ ಈ ಹಿಂದೆ ಬ್ಯೂಟಿ ಪಾರ್ಲರ್‌ಗಳಲ್ಲಿ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂದು ಹೇಳಿತ್ತು. ತಾಲಿಬಾನ್ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿತ್ತು. ತಾಲಿಬಾನ್ ಈಗ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ 10 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರನ್ನು ಪ್ರಾಥಮಿಕ ಶಾಲೆಗೆ ಸೇರಿಸದಂತೆ ಸೂಚನೆ ನೀಡಿದೆ.

Exit mobile version