Site icon PowerTV

ಚುನಾವಣೆಯಲ್ಲಿ ಮುಸ್ಲಿಮರಿಗೆ ಆದ್ಯತೆ ಕೊಡಬೇಕು : ಸಚಿವ ರಹೀಂ ಖಾನ್

ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಆದ್ಯತೆ ಕೊಡಬೇಕು ಎಂದು ಸಚಿವ ರಹೀಂ ಖಾನ್ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಅಲ್ಪಸಂಖ್ಯಾತ ಶಾಸಕರ ಸಭೆ ನಡೆಸಲಾಯಿತು. ಸಭೆ ಮುಗಿದ ಬಳಿಕ ಸಚಿವ ರಹೀಂ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಇಂದು ಅಲ್ಪಸಂಖ್ಯಾತ ನಾಯಕರ ಸಭೆ ಆಗಿದೆ. ಎಲ್ಲಾ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಸದ್ಯದಲ್ಲೇ ಲೋಕಸಭೆ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಎಲೆಕ್ಷನ್ ಬರಲಿದೆ. ಚುನಾವಣೆಯಲ್ಲಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ನಾಯಕರು ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಅಲ್ಪಸಂಖ್ಯಾತರಿಗೆ 2 ಸೀಟು ಡಿಮ್ಯಾಂಡ್ ಮಾಡ್ತೀವಿ : ಸಲೀಂ ಅಹಮದ್

ಶೇ.90ರಷ್ಟು ಕಾಂಗ್ರೆಸ್​ಗೆ ವೋಟು

ನಾಲ್ಕು ಡಿವಿಜನ್​ಗಳಲ್ಲಿಯೂ ಸಮುದಾಯವನ್ನು ಪರಿಗಣಿಸಬೇಕು. ಇನ್ನೊಂದು ಸಭೆ ನಡೆಸಬೇಕು ಎಂದುಕೊಂಡಿದ್ದೇವೆ. ಈ ಬಾರಿ ನಮ್ಮ ಸಮುದಾಯದವರು ಶೇ.95ರಷ್ಟು ಮತಗಳನ್ನ ಕಾಂಗ್ರೆಸ್‌ಗೆ ಹಾಕಿದ್ದಾರೆ. ಸಿಎಂ, ಡಿಸಿಎಂ ಅವರ ಜೊತೆಗೆ ಮಾತನಾಡಿ, ಸಮುದಾಯಕ್ಕೆ ಹೆಚ್ಚು ಸ್ಥಾನ ಕೊಡಬೇಕೆಂಬ ಪ್ರಸ್ತಾವವನ್ನಿಡುತ್ತೇವೆ ಎಂದು ಹೇಳಿದ್ದಾರೆ.

Exit mobile version