Site icon PowerTV

HDK ಪೆನ್​ಡ್ರೈವ್ ಬಗ್ಗೆ ನಾನು ಆನ್ಸರ್ ಮಾಡಲ್ಲ : ಬೈರತಿ ಸುರೇಶ್

ರಾಯಚೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪೆನ್​ಡ್ರೈವ್ ಬಾಂಬ್​ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಲೇವಡಿ ಮಾಡಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಅದರ ಬಗ್ಗೆ ದಾಖಲೆ ಕೊಡಲಿ, ತನಿಖೆಯಾಗಲಿ ನೋಡೋಣ ಎಂದು ಹೇಳದಿದ್ದಾರೆ.

ಯಾಕೆ ಮುಗಿಬಿದ್ದು, ಪ್ರತಿಪಕ್ಷಗಳಿಗೆ, ಮಂತ್ರಿಗಳು ಯಾಕೆ ಉತ್ತರ ಕೊಡಬೇಕು ಅಂತ ಯಾರೋ ಅಂದ್ರು. ಅದಕ್ಕೆ ನಾವು ಯಾಕೆ ಉತ್ತರ ಕೊಡಬೇಕು. ಜನಗಳೇ ಉತ್ತರ ಕೊಡ್ತಾರೆ. ಅವರ ಪೆನ್​ಡ್ರೈವ್ ಬಗ್ಗೆ ನಾನು ಆನ್ಸರ್‌ ಮಾಡಲ್ಲ. ಹೇಳಿದ್ದನ್ನೇ ಹೇಳ್ಕೊಂಡ್ ಹೋಗ್ತಾರೆ ಎಂದು ಕುಟುಕಿದ್ದಾರೆ.

ಪ್ರತಿದಿನ ಆರೋಪ ಮಾಡ್ತಾರೆ, ಅದಕ್ಕೆ ನಾವು ಪ್ರತಿದಿನ ಉತ್ತರ ಕೊಡ್ತಾ ಹೋದ್ರೆ ಬೆಲೆನೇ ಇರಲ್ಲ. ಡೈಲಿ ಅದರ ಬಗ್ಗೆನೇ ಮಾತಾಡಿದ್ರೆ ಬೆಲೆ ಇರುತ್ತಾ? ಅವರು ಏನು ಕೊಡ್ತಾರೆ ಕೊಡಲಿ, ತನಿಖೆ‌ ನಡೆಯಲಿ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಶಾಸಕರುಗಳ ಕೆಲಸ ಆಗಲಿ

ನಾಳೆ ಕೆಲವು ಜಿಲ್ಲೆಯ ಶಾಸಕರ ಜೊತೆ ಸಿಎಂ ಮೀಟಿಂಗ್ ವಿಚಾರವಾಗಿ ಮಾತನಾಡಿ, ನಮಗೂ ಕೆಲವು ಇನ್ಸ್​ಟ್ರಕ್ಷನ್ ಇದಾವೆ. ಶಾಸಕಾಂಗ ಸಭೆಯಲ್ಲಿ ಜನಗಳ ಕೆಲಸ ಆಗಲಿ, ಶಾಸಕರುಗಳ ಕೆಲಸ ಆಗಲಿ ಎಂದಿದ್ದಾರೆ ಅಷ್ಟೆ. ನಾಳೆ ಯಾವ ಅಸಮಾಧಾನಿತ ಶಾಸಕರೊಡನೆಯೂ ಮೀಟಿಂಗ್ ಇಲ್ಲ ಎಂದು ತಿಳಿಸಿದ್ದಾರೆ.

ಶಾಸಕರ ಆಪೇಕ್ಷೆಗಳು ಇರ್ತವೆ

ನಮ್ಮಲ್ಲಿ ಯಾವುದೇ ಶಾಸಕರ ನಡುವೆ ಅಸಮಾಧಾನ ಇಲ್ಲ. ಹೊಸ ಸರ್ಕಾರ ಬಂದಾಗ ಹೊಸ ಶಾಸಕರುಗಳ, ಸಾರ್ವಜನಿಕರ ಹೊಸ ಕೆಲಸಗಳ ಆಪೇಕ್ಷೆಗಳು ಇರುತ್ತವೆ. ಆ ಆಪೇಕ್ಷೆಗಳಿಗೆ ಸ್ಪಂದಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅದನ್ನು ಮಾಡಿ ಎಂದು ಹೇಳಿದಾರೆ ಅದರ ಪ್ರಕಾರ ಸಭೆಗಳು ನಡೀತಾ ಇದಾವೆ ಅಷ್ಟೇ.. ಎಂದು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ.

Exit mobile version