Site icon PowerTV

ಪೊಲೀಸ್​ ಮಹಾನಿರ್ದೇಶಕರಾಗಿ ಅಲೋಕ್​ ಮೋಹನ್ ಮುಂದುವರಿಸಿ ಸರ್ಕಾರ ಆದೇಶ​!

ಬೆಂಗಳೂರು : ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ಹೊಂದಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ ಅವರನ್ನು ಅದೇ ಹುದ್ದೆಗೆ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

ಇದನ್ನೂ ಓದಿ: ಟಿ.ಎಸ್ ನಾಗಾಭರಣಗೆ ಗೌರವ ಡಾಕ್ಟರೇಟ್​ ಪದವಿ ಪ್ರಧಾನ!

ಸೇವಾ ಹಿರಿತನದ ಆಧಾರದ ಮೇಲೆ 87ನೇ ಬ್ಯಾಚ್‌ನ ಅಧಿಕಾರಿ ಹಾಗೂ ರಾಜ್ಯ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿದ್ದ ಅಲೋಕ್ ಮೋಹನ್ ಅವರನ್ನು ಪ್ರವೀಣ್ ಸೂದ್‌ರಿಂದ ತೆರವಾದ ಸ್ಥಾನಕ್ಕೆ ರಾಜ್ಯ ಸರ್ಕಾರ ಮೇ 21ರಂದು ನೇಮಕಗೊಳಿಸಿತ್ತು ಮತ್ತು ಮೇ 22 ರಂದು ಇವರು ಅಧಿಕಾರ ವಹಿಸಿಕೊಂಡಿದ್ದರು.

ಪ್ರಸ್ತುತ ಅಗ್ನಿಶಾಮಕ ಮತ್ತು ತುರ್ತು ಸೇವೆ ಹಾಗೂ ಗೃಹರಕ್ಷಕ ದಳದ ಡಿಜಿ ಸ್ಥಾನದಿಂದ ಬಿಡುಗಡೆಗೊಳಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ & ಐಜಿಪಿ) ಸ್ಥಾನದಲ್ಲಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

Exit mobile version