Site icon PowerTV

ಫುಟ್​ಬಾಲ್​ ಆಟಗಾರನನ್ನು ಕಚ್ಚಿ ಎಳೆದೊಯ್ದ ಮೊಸಳೆ: ವೀಡಿಯೋ ವೈರಲ್​!

ಸ್ಯಾನ್ ಜೋಸ್: ಮೀನುಗಾರಿಗೆ ಸೇತುವೆ ಮೇಲೆ ವ್ಯಾಯಾಮ ಮಾಡುವ ವೇಳೆ ಮೊಸಳೆ ದಾಳಿಗೊಳಗಾದ ಅಮೇರಿಕಾದ ಫುಟ್ಬಾಲ್​ ಆಟಗಾರ ಸಾವಿಗೀಡಾದ ಘಟನೆ ಅಮೇರಿಕಾದ ಸ್ಯಾನ್​ ಜೋಸ್​ ಬಳಿ ನಡೆದಿದೆ.

ಇದನ್ನು ಓದಿ: ಸರ್ಕಾರಿ ಶಾಲೆಗೆ ಕನ್ನ ಹಾಕಿದ ಖದೀಮರು

ಅಮೇರಿಕದ ಫುಟ್ಬಾಲ್ ಆಟಗಾರ ಜೀಸಸ್ ಆಲ್ಬರ್ಟೊ ಲೋಪೆಜ್ ಒರ್ಟಿಜ್(29) ಮೃತ ದುರ್ದೈವಿ, ಮೊಸಳೆ ದಾಳಿಗೆ  ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕಾದ ಕೋಸ್ಟರಿಕಾ ರಾಜಧಾನಿ ಸ್ಯಾನ್ ಜೋಸ್‌ನಿಂದ 140 ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ಮೊಸಳೆಯು ಒರ್ಟಿಜ್ ದೇಹವನ್ನು ನದಿಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೀಸಸ್ ಆಲ್ಬರ್ಟೊ ಅವರು ಮೀನುಗಾರಿಕೆ ಸೇತುವೆಯ ಬಳಿ ವ್ಯಾಯಾಮ ಮಾಡುತ್ತಿದ್ದಾಗ ಅವರ ಮೇಲೆ ಮೊಸಳೆ ದಾಳಿ ಮಾಡಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಫುಟ್​ಬಾಲ್​ ಆಟಗಾರ ಒರ್ಟಿಜ್ ಡಿಪೋರ್ಟಿವೊರಿಯೊ ಅವರು ಕ್ಯಾನಸ್ ಅಮೆಚೂರ್ ಸಾಕರ್ ಕ್ಲಬ್‌ನ ಸದಸ್ಯರಾಗಿದ್ದಾರೆ.

 

Exit mobile version