Site icon PowerTV

ನೀವು ಬೆಂಕಿ ಹಚ್ಚಿ.. ನಾನಿದ್ದೀನಿ.. : ವೀರೇಂದ್ರ ಪಪ್ಪಿ ಯಡವಟ್ಟು

ಚಿತ್ರದುರ್ಗ : ಇತ್ತೀಚೆಗೆ ಯಡವಟ್ಟು ಮಾಡುವುದರಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಫೇಮಸ್ ಆಗುತ್ತಿದ್ದಾರೆ. ಇದೀಗ ಮತ್ತೊಂದು ಯಡವಟ್ಟು ಮಾಡಿದ್ದಾರೆ.

ಹಿರೇಗುಂಟನೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡ್ತಿದ್ದಾರೆಂದು ಮಹಿಳೆಯರು ಆರೋಪ ಮಾಡ್ತಿದ್ದ ವೇಳೆ ಮಹಿಳೆಯರಿಗೆ ಪ್ರಚೋದಕಾರಿ ಹೇಳಿಕೆ ನೀಡಿದ್ದಾರೆ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ತೊಂದರೆ ಹೆಚ್ಚಾಗಿದ್ದು, ಕುಡಿದು ಬಂದ ಪುರುಷರು ದಿನನಿತ್ಯ ಮನೆಗಳಲ್ಲಿ ಗಲಾಟೆ ಮಾಡ್ತಿದ್ದಾರೆ. ದಯವಿಟ್ಟು ನೀವಾದ್ರು ಸಮಸ್ಯೆ ಬಗೆಹರಿಸಿ ಇಲ್ಲದಿದ್ರೆ ಮದ್ಯ ಮಾರಾಟ ಮಾಡುವವರ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು.

ಏನೇ ಆದ್ರೂ ನಾನು ನೊಡ್ಕೋತಿನಿ

ಈ ವೇಳೆ ಮಹಿಳೆಯರ ಮಾತಿಗೆ ಉತ್ತೇಜನ ಕೊಟ್ಟ ಶಾಸಕ, ನೀವು ಬೆಂಕಿ ಹಚ್ಚಿ, ಯೋಚನೆ ಮಾಡಬೇಡಿ ಏನೇ ಆದ್ರೂ ನಾನು ನೊಡ್ಕೋತಿನಿ ಅಂತ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸದ್ಯ ಶಾಸಕರು ಬೆಂಕಿ ಹಚ್ಚಲು ಪ್ರಚೋದನೆ ಮಾಡಿರೋ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Exit mobile version