Site icon PowerTV

ನಿವೇಶನ ವಿಚಾರಕ್ಕೆ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ

ಮೈಸೂರು : ನಿವೇಶನ ವಿಚಾರಕ್ಕೆ ಮಹಿಳೆಯೊಬ್ಬಳು ಯುವಕನ ಮೇಲೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮೈಸೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.

ಗುಂಡೇಗೌಡ ಎಂಬುವವರ ಪತ್ನಿ ಸುಶೀಲ ಹಾಗೂ ಆಕೆಯ ಸಂಬಂಧಿ ಸುರೇಶ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆ‌ ಮಾಡಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.

ಶಿವಣ್ಣ ಎಂಬುವವರ ಮಗ, ವಿಶ್ವನಾಥ್ ಪತ್ನಿ ಶುಭ ಸೇರಿ ಹಲವರು ಸುರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. 30*50 ನಿವೇಶನ ವಿಚಾರವಾಗಿ ಗಲಾಟೆ ನಡೆದಿದ್ದು, 14 ವರ್ಷದ ಹಿಂದೆ ಶಿವಣ್ಣ 5 ಲಕ್ಷಕ್ಕೆ ಗುಂಡೇಗೌಡರಿಗೆ ಮಾರಾಟ ಮಾಡಿದ್ದರು. ಆದ್ರೆ, 2016ರಿಂದ ನಿವೇಶನ ವಾಪಸ್ಸು ಕೊಡುವಂತೆ ಶಿವಣ್ಣ ಗಲಾಟೆ ಮಾಡುತ್ತಿದ್ದಾರೆ.

ಇದೇ ಕಾರಣಕ್ಕೆ ನಿವೇಶನದ ಬಳಿ ಇದ್ದ ಗುಂಡೇಗೌಡ ಪತ್ನಿ ಹಾಗೂ ಸಂಬಂಧಿ ಮೇಲೆ ಶಿವಣ್ಣನವರ ಕುಟುಂಬದವರು ಹಲ್ಲೆ ಮಾಡಿದ್ದಾರೆ ಎಂದು ಸುರೇಶ್ ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version