Site icon PowerTV

ಎಣ್ಣೆಯಲ್ಲಿ ವಿಷ ಬೆರೆಸಿ, ಕುಡಿದು ಹೆಡ್​ಕಾನ್ಸ್​ಟೇಬಲ್ ಆತ್ಮಹತ್ಯೆ

ಬೆಂಗಳೂರು : ವಿಜಯನಗರ ಸಂಚಾರ ಠಾಣೆಯ ಹೆಡ್​ಕಾನ್ಸ್​ಸ್ಟೇಬಲ್ ನವೀನ್ ಕುಮಾರ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಅಂಶ ಬಹಿರಂಗವಾಗಿದೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನವೀನ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ‌ ವ್ಯಕ್ತವಾಗಿದ್ದು, ಈ ಬಗ್ಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ವಿಜಯನಗರ ಸಂಚಾರ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಮೃತ ನವೀನ್ ಅತ್ತಿಗುಪ್ಪೆಯಲ್ಲಿ ವಾಸವಾಗಿದ್ದ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮದ್ಯದಲ್ಲಿ ವಿಷ ಸೇವಿಸಿ ಬೆರಸಿಕೊಂಡು ಕುಡಿದಿದ್ದಾರೆ ಎನ್ನಲಾಗಿದೆ.

ವಿಷ ಸೇವಿಸಿರುವುದು ಪತ್ತೆ

ನಿನ್ನೆ ಬೆಳಗ್ಗೆ ನವೀನ್ ಫೋನ್ ಕರೆ ಸ್ವೀಕರಿಸದೇ ಇದ್ದಾಗ ಮನೆಗೆ ಹೋಗಿ ಚೆಕ್ ಮಾಡಿದ್ದಾರೆ. ಈ ವೇಳೆ ನವೀನ್ ಮೃತದೇಹ ಪತ್ತೆಯಾಗಿತ್ತು. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ವಿಷ ಸೇವಿಸಿರುವುದು ಪತ್ತೆಯಾಗಿದೆ.

Exit mobile version