Site icon PowerTV

ದಾರಿ ಕೇಳಿದ್ದಕ್ಕೆ ಮಹಿಳೆ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆಗೆ ಯತ್ನ

ತುಮಕೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಕೊಲೆಗೆ ಯತ್ನಿಸಿರುವ ಘಟನೆ ಪಾವಗಡ ತಾಲೂಕಿನ ತಿಮ್ಮಮ್ಮನಹಳ್ಳಿಯಲ್ಲಿ ನಡೆದಿದೆ. 

ಸುಬ್ಬಯ್ಯ ಕೊಲೆಗೆ ಯತ್ನಿಸಿದ ವ್ಯಕ್ತಿ. ಈತನು, ತಿಮ್ಮಮ್ಮನಹಳ್ಳಿಯಿಂದ ಉಪ್ಪಾರಹಳ್ಳಿಗೆ ಹೋಗುವ ದಾರಿಯಲ್ಲಿ ಕಲ್ಲು ಹಾಕಿ ಬಂದ್ ಮಾಡಿದ್ದ. ಸಾರ್ವಜನಿಕರು ಓಡಾಡುವ ದಾರಿಯಲ್ಲಿ ಏಕೆ ಕಲ್ಲು ಹಾಕಿದ್ದೀಯಾ? ದಾರಿ ಬಿಡು, ಎಂದು ಪ್ರಶ್ನೆ ಮಾಡಿದ್ದ ಅಕ್ಕಮ್ಮನ ಮೇಲೆ ಕಲ್ಲು ಎತ್ತಿ ಹಾಕಲು ಮುಂದಾಗಿದ್ದಾರೆ.

ಇದನ್ನು ಓದಿ : ಅಲ್ಪಸಂಖ್ಯಾತರಿಗೆ 2 ಸೀಟು ಡಿಮ್ಯಾಂಡ್ ಮಾಡ್ತೀವಿ : ಸಲೀಂ ಅಹಮದ್

ದಾರಿ ಬಿಡುವ ಕ್ಷುಲ್ಲಕ ಕಾರಣಕ್ಕೆ ಅಕ್ಕಮ್ಮ ಮತ್ತು ಸುಬ್ಬಯ್ಯನ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಯಿತು. ಬಳಿಕ ಜಗಳ ಅತಿರೇಕಕ್ಕೆ ಹೋಗಿ ಜಮೀನಿನಲ್ಲಿ ಇದ್ದ ಸೈಜುಗಲ್ಲು ತೆಗೆದು ಅಕ್ಕಮ್ಮನ ತೆಲೆ ಮೇಲೆ ಎತ್ತಾಕಿ ಕೊಲೆಗೆ ಯತ್ನಿಸಲು ಮುಂದಾಗಿದ್ದಾನೆ.

ಅದೃಷ್ಟವಶಾತ್ ಅಕ್ಕಮ್ಮ ಬಚಾವ್ ಆಗಿದ್ದಾರೆ. ಕಲ್ಲು ಎತ್ತಾಕಿದ್ದರಿಂದ ಅಕ್ಕಮ್ಮನ ಸೊಂಟ ಮತ್ತು ಕಾಲಿಗೆ ಗಂಭೀರ ಗಾಯಾವಾಗಿದ್ದು, ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ತಿರುಮಣಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version