Site icon PowerTV

ವಿಶ್ವ ಸ್ತನ್ಯಪಾನ ವಾರದ ಪ್ರಯುಕ್ತ ವಾಕಥಾನ್

ಬೆಂಗಳೂರು : ಶ್ರೀ ಲಕ್ಷ್ಮೀ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವತಿಯಿಂದ ವಿಶ್ವ ಸ್ತನ್ಯಪಾನ ವಾರದ ಪ್ರಯುಕ್ತ ಜನರಲ್ಲಿ ಜಾಗ್ರತಿ‌ ಮೂಡಿಸುವ ಸಲುವಾಗಿ ವಾಕಥಾನ್ ನಡೆಸಲಾಯಿತು.

ಬ್ರೆಸ್ಟ್ ಫೀಡಿಂಗ್ ಕುರಿತಾಗಿ ಜಾಗ್ರತಿ ಮೂಡಿಸಲು ಸುಮಾರು 5 ಕಿಲೋ‌ ಮೀಟರ್ ವರೆಗೆ ವಾಕಥಾನ್ ಮಾಡಲಾಯಿತು. ಬ್ರೆಸ್ಟ್ ಫೀಡಿಂಗ್ ನಿಂದ ಮಗು‌ ಮತ್ತು ತಾಯಿಯ ಆರೊಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತೆ. ಬ್ರೆಸ್ಟ್ ಕ್ಯಾನ್ಸರ್ ಬರುವ ಸಂಭವವನ್ನು ಕೂಡ ಕಡಿಮೆ ಮಾಡುತ್ತೆ ಎಂದು ತಿಳಿಸಿದರು.

ವರ್ಡ್ಲ್ ವಾಯ್ಡ್ ಬುಕ್ ಅಫ್ ರೆಕಾರ್ಡ್‌ನ ಸೌತ್ ಜೋನ್ ಸದಸ್ಯೆ ಸಿಂಧು ಮಾತನಾಡಿ, ಬ್ರೆಸ್ಟ್ ಫೀಡಿಂಗ್ ಬಗ್ಗೆ ಲಕ್ಷ್ಮೀ ಗ್ರೂಪ್‌‌ಆಪ್ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ‌ ಜಾಗ್ರತಿ ಮೂಡಿಸುತ್ತಿದ್ದು ಪ್ರಶಸ್ತಿ ಪ್ರಧಾನ ಮಾಡಿದ್ದು ಹೆಮ್ಮೆಯ‌ ಸಂಗತಿ‌ ಎಂದು ಹೇಳಿದರು.

ಜಾಗ್ರತಿ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾಧ ಡಾ.ಸಂದ್ಯಾ ರಾಣಿ ರೆಡ್ಡಿ, ಡಾ.ನರಸಿಂಹ ಮೂರ್ತಿ, ಸಂಸ್ಥೆಯ ಸಿಇಒ ರಾ‌ಘವೇಂದ್ರ ಸೇರಿದಂತೆ ನೂರಾರು ಸಿಬ್ಬಂದಿಗಳು ಭಾಗವಸಿದ್ದರು.

Exit mobile version