Site icon PowerTV

ಜೈಲಿನಿಂದ ಹೊರಬಂದ ಬೆನ್ನಲ್ಲೇ ರೌಡಿಶೀಟರ್​ ಕೊಲೆ: ದುಷ್ಕರ್ಮಿಗಳು ಪರಾರಿ

ಬೆಂಗಳೂರು : ಜೈಲಿನಿಂದ ಬಿಡುಗಡೆಯಾದ ಕೇಲವೆ ಗಂಟೆಗಳಲ್ಲಿ ರೌಡಿಶೀಟರ್ ಒರ್ವನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಪರಪ್ಪನ ಅಗ್ರಹಾರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಸಿದ್ದಾಪುರ ಮಹೇಶ್ ಮೃತಪಟ್ಟ ವ್ಯಕ್ತಿ, ಇಂದು ಜೈಲಿನಿಂದ ಆಚೆ ಬರುತ್ತಿದ್ದಂತೆ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳು. ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ, ಸಿದ್ಧಾಪುರ ಸುನೀಲ್ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಿದ ಪೋಲಿಸರು.

ಇದನ್ನು ಓದಿ : ಅಪಘಾತ ತಪ್ಪಿಸಲು ಹೋಗಿ ರಸ್ತೆ ಬದಿಗೆ ಉರುಳಿದ ಬಸ್

ಸಿದ್ದಾಪುರ ಮಹೇಶ್ ಮತ್ತು ವಿಲ್ಸನ್ ಗಾರ್ಡನ್ ನಾಗ ಎಂಬುವನ ಮಧ್ಯೆ ಹಳೇ ದ್ವೇಷವಿತ್ತು. ಪ್ರೀತಿಸಿದ ಹುಡುಗಿಯ ಮದುವೆಯಾಗುವ ಸಲುವಾಗಿ ಹೊರ ಬಂದಿದ್ದ ಮಹೇಶ. ಮದುವೆ ನಂತರ ಇದೇ ವಿಲ್ಸನ್ ಗಾರ್ಡನ್ ನಾಗನ ಭಯದಿಂದ ಮತ್ತೆ ಜೈಲಿಗೆ ಸೇರಿದ್ದ ಮಹೇಶ.

ಬಳಿಕ ಹೆಂಡತಿಯನ್ನು ನೋಡುವ ಸಲುವಾಗಿ ಹೊರಬಂದಿದ್ದ ರೌಡಿಶೀಟರ್​. ಸಹಚರರ ಜೊತೆ ತೆರಳುತ್ತಿದ್ದ ವೇಳೆ ಮಹೇಶ್ ಮೇಲೆ ದಾಳಿ​ ಮಾಡಿದ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್. ನಡುರಸ್ತೆಯಲ್ಲಿ ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪರಪ್ಪನ ಅಗ್ರಹಾರ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Exit mobile version