Site icon PowerTV

ಎಂಎಲ್​ಸಿ ಹೆಚ್. ವಿಶ್ವನಾಥ್ ಪುತ್ರನಿಗೆ 1.99 ಲಕ್ಷ ವಂಚನೆ

ಮೈಸೂರು : ಆನ್​ಲೈನ್​ನಲ್ಲಿ ದಿನೇ ದಿನೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯರ ಪುತ್ರನಿಗೇ ವಂಚನೆ ಮಾಡಿದ್ದಾರೆ.

ಆನ್‌ಲೈನ್ ಮೂಲಕ ಎಂಎಲ್​ಸಿ ಹೆಚ್. ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಖಾತೆಗೆ ಕನ್ನ ಹಾಕಲಾಗಿದೆ. ಅಮಿತ್ ಎಟಿಎಂ(ATM)ನಲ್ಲಿ ಹಣ ಡ್ರಾ ಮಾಡಲು ಅಮಿತ್ ಹೋಗಿದ್ದಾರೆ. ಈ ವೇಳೆ ಎಟಿಎಂ(ATM)ನಿಂದ ಹಣ ಬಂದಿಲ್ಲ.

ಗಾಬರಿಯಾದ ಅಮಿತ್ ಗೂಗಲ್​ನಲ್ಲಿ ಬ್ಯಾಂಕ್​ನ ಹೆಲ್ಪ್​ಲೈನ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಬ್ಯಾಂಕ್ ಖಾತೆ ವಿವರ ಪಡೆದು 1.99 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಹಣ ಲಪಟಾಯಿಸಿದ ಅಪರಿಚಿತ ವ್ಯಕ್ತಿ ವಿರುದ್ಧ ಅಮಿತ್ ದೇವರಹಟ್ಟಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Exit mobile version