Site icon PowerTV

ಬಿಜೆಪಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಗೋವಿಂದ ಕಾರಜೋಳ

ಬಾಗಲಕೋಟೆ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಳಮೀಸಲಾತಿ ಕಾರಣ ಎನ್ನುವುದು ಭ್ರಮೆಯಷ್ಟೇ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ವ್ಯಂಗ್ಯವಾಡಿದರು.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಳಮೀಸಲಾತಿ ಅಷ್ಟೇ ಅಲ್ಲ, ಹಲವು ಕಾರಣಗಳಿವೆ. ಚುನಾವಣೆಗೂ ಮುನ್ನ ಮಾಡಿದ ಹಲವಾರು ತಪ್ಪು ಲೆಕ್ಕಚಾರಗಳಿಂದಾಗಿ ಸೋಲು ಅನುಭವಿಸುವಂತಾಯಿತು ಎಂದು ಹೇಳಿದರು.

ಶೋಷಿತರಿಗೆ ನ್ಯಾಯ ಕಲ್ಪಿಸುವುದಕ್ಕಾಗಿ ಒಳಮೀಸಲಾತಿ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. 72 ಮಂದಿ ಹೊಸಬರಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಮಾಡಿದ ಸುಳ್ಳು ಆರೋಪಗಳನ್ನು ಜನರು ನಂಬಿದ್ದು, ಎಲ್ಲ ಸೇರಿ ಸೋಲಾಯಿತು. ಆದರೆ, ಒಳಮೀಸಲಾತಿಯಿಂದಲೇ ಸೋಲಾಯಿತು ಎಂದು ಕೆಲವರು ದಾರಿ ತಪ್ಪಿಸುತ್ತಿದ್ದಾರೆಂದು ತಿಳಿಸಿದರು.

Exit mobile version