Site icon PowerTV

ನನ್ಗೆ ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ : ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್​ ಜೊತೆ ಹೋಗುವ ದಾರಿದ್ರ್ಯ ನಮಗೆ ಬಂದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದು ಕುಟುಕಿದ್ದಾರೆ.

ನಾನು ಕಾರ್ಯಕರ್ತರಿಗೆ ಹೇಳುತ್ತೇನೆ. ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ. ನಾವು ಯಾವುದೇ ಪಕ್ಷಗಳ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ. ನಾನು ಯಾರ ಮನೆ ಬಾಗಿಲಿಗೂ ಹೋಗಲ್ಲ. ನಮ್ಮ ರಾಜ್ಯಕ್ಕೆ ಕಾಂಗ್ರೆಸ್​ನವರು ಎಷ್ಟು ದ್ರೋಹ ಮಾಡಿದ್ದಾರೆಯೋ, ಅಷ್ಟೇ ದ್ರೋಹವನ್ನು ಬಿಜೆಪಿಯವರು ಕೂಡ ಮಾಡಿದ್ದಾರೆ ಎಂದು ಗುಡುಗಿದ್ದಾರೆ.

ಇದಕ್ಕೆನಾ.. ಪೆನ್ ಕೇಳ್ತಾ ಇದ್ದಿದ್ದು

ಫೆರಿಫಿರಲ್ ರಿಂಗ್ ರೋಡ್ ಮಾಡಲು, ನೈಸ್ ಜೊತೆ ಸೇರಿ ಮಾಡಲು ಹೊರಟಿದ್ದಾರೆ. ಬಡವರನ್ನು ಒಕ್ಕೆಲೆಬ್ಬಿಸಲು ಹೊರಟಿದ್ದೀರಿ. ಇದಕ್ಕೆನಾ.. ನೀವು ಪೆನ್ ಕೇಳ್ತಾ ಇದ್ದಿದ್ದು. ಅಧಿಕಾರಕ್ಕೆ ಬರೋಕೆ ಮುಂಚಿತವಾಗಿ ನನಗೆ ಒಂದು ಬಾರಿ ಪೆನ್ ಕೊಟ್ಟು ನೋಡಿ ಅಂತ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Exit mobile version