Site icon PowerTV

ಕೋಟ್ಯಾಂತರ ರೂ. ಬೆಲೆಬಾಳುವ ಆಸ್ತಿ ಕಬಳಿಸಲು ಯತ್ನ; ಸಿಕ್ಕಿಬಿದ್ದ ಖದೀಮರು

ಗದಗ : ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಕಬಳಿಸಲು ಹೋಗಿ ಸಿಕ್ಕಿಬಿದ್ದರುವ ಘಟನೆ ಜಿಲ್ಲೆಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆದಿದೆ.

ಗದಗನ ಸಾಹುಕಾರ್ ಕುಟುಂಬದ ಶೀಲಾಬಾಯಿ ಸಾಹುಕಾರ, ಯೋಗೇಶ , ಶ್ರೀಧರದಾಸ , ಮಂಜುಳದಾಸ, ತೃಪ್ತಿಬಾಯಿ, ಬಾವಿ ಸಾಹುಕಾರ್​ಗಳಿಗೆ ಸೇರಿದ್ದ ಆಸ್ತಿ. ಸುಮಾರು 20 ಎಕರೆ ಜಮೀನು ಕಬಳಿಕೆಗೆ ಯತ್ನಿಸಿದ್ದ ಆರೋಪಿಗಳು. ಭೂ ಕಬಳಿಕೆ ವ್ಯವಸ್ಥಿತ ಜಾಲ ಇದೆ ಎನ್ನುವ ಗುಮಾನಿಯಿಂದ, ಗದಗ ಶಹರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು.

ಇದನ್ನು ಓದಿ : ಆಸ್ತಿ ವಿಚಾರಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ

ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿದ್ದ ಆಸ್ತಿ. ಈ ಆಸ್ತಿ ಅಂದಾಜು 30 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯಾಗಿದ್ದು, ಅದನ್ನು ಹೇಗಾದರೂ ಪಡೆದುಕೊಳ್ಳುವ ದುರಾಸೆಯಿಂದ ಆಧಾರ್ ಕಾರ್ಡ್ ಸೇರಿ ಜಮೀನಿನ ಫೇಕ್ ದಾಖಲೆಗಳನ್ ಸೃಷ್ಟಿಸಿದ್ದ ಖದೀಮರ ಗ್ಯಾಂಗ್. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸಿಕ್ಕಿಬಿದ್ದ ಜಾಲ.

ಬಳಿಕ ಮೂವರು ಮಹಿಳೆಯರು ಸೇರಿ ಹಲವರನ್ನು ವಶಕ್ಕೆ ಪಡೆದ ಖಾಕಿ.

Exit mobile version