Site icon PowerTV

ಪಾಪ.. ಕುಮಾರಸ್ವಾಮಿ ನಿದ್ದೆಗೆಟ್ಟವ್ರೆ : ಚಲುವರಾಯಸ್ವಾಮಿ

ಮಂಡ್ಯ : ಒಂದು ಪೆನ್​ಡ್ರೈವ್ ತೋರಿಸಿದ್ದಕ್ಕೆ ಎಷ್ಟೋ ಮಂತ್ರಿಗಳು ನಿದ್ದೆಗೆಟ್ಟಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆಗೆ ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೆನ್​ಡ್ರೈವ್ ಇಟ್ಕೊಂಡು ಪಾಪ ಕುಮಾರಸ್ವಾಮಿ ನಿದ್ದೆಗೆಟ್ಟವ್ರೆ. ಯಾರು ನಿದ್ದೆಗೆಟ್ಟಿಲ್ಲ.. ಪಾಪ ಅವರೇ ನಿದ್ದೆ ಗೆಟ್ಟಿದ್ದಾರೆ. ಅವರು ಸಾಬೀತು ಮಾಡಲಿ ಬೇಡ ಅಂದವರು ಯಾರು?ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಪ್ರಯತ್ನ ಮಾಡ್ತಿದ್ದಾರೆ. ವೈಎಸ್​ಟಿ(YST), ಟೀಕೆ ಮಾಡೋದು ಬಾಂಬ್ ಸಿಡಿಸ್ತೇವೆ ಅಂತಾರೆ. ರಾಜ್ಯಕ್ಕೆ ಉಪಯೋಗ ಹಾಗೋದನ್ನು ಹೇಳಿ. ಸರ್ಕಾರ ಬಂದಾಗ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಭ್ರಮೆಯಿಂದ ಹೊರಗೆ ಬನ್ನಿ ಎಂದು ಚಾಟಿ ಬೀಸಿದ್ದಾರೆ.

ಸರ್ಕಾರ ಅಲ್ಲಾಡಿಸೋಕೆ ಆಗಲ್ಲ

ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಬಿಜೆಪಿ ಹಾಗೂ ಜೆಡಿಎಸ್​ನಿಂದ ಸಾಧ್ಯವಿಲ್ಲ. ಜನಪರ ಯೋಜನೆ ಕೊಟ್ಟಿದ್ದೇವೆ. ದಲಿತರು, ಮುಸ್ಲಿಂ, ರೈತರು ಎಲ್ಲರ ಪರ ಇದ್ದೇವೆ, ಯಾರನ್ನು ವಿಂಗಡನೆ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿ. ಉಚಿತ ಅನ್ನಭಾಗ್ಯ ಕೊಟ್ಟಿದ್ದೇವೆ. ರಾಜ್ಯದ ಜನರಿಗೆ ಅಕ್ಕಿ ಸಿಗಬಾರದು ಅನ್ನೋದೆ ಬಿಜೆಪಿ ಉದ್ದೇಶ. ಅಕ್ಕಿ ಜೊತೆ ದುಡ್ಡು ಕೊಟ್ಟಿದ್ದೇವೆ. ಜನರು ಖುಷಿ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

Exit mobile version