Site icon PowerTV

ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-3, ಇನ್ನೊಂದೇ ಹೆಜ್ಜೆ ಬಾಕಿ!

ಬೆಂಗಳೂರು : ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನತ್ತ ತನ್ನ ಪ್ರಯಾಣದ ಮೂರನೇ ಎರಡರಷ್ಟು ಭಾಗವನ್ನು ಮುಕ್ತಾಯ ಮಾಡಿದೆ. ಮಹತ್ವದ ಚಂದ್ರನ ಕಕ್ಷೆಯ ಇಂಜೆಕ್ಷನ್ ಅನ್ನು ಇಂದು ಯಶಸ್ವಿಯಾಗಿ ಪೂರೈಸಿದೆ.

ಈ ಕುರಿತು ಇಸ್ರೋ ಟ್ವೀಟ್​ ಮಾಡಿದ್ದು, ನಮಗೆ ಚಂದ್ರನ ಗ್ರ್ಯಾವಿಟಿ ಫೀಲ್‌ ಆದಂತೆ ಅನಿಸಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡಲಾಗಿದೆ. ಪೆರಿಲುನ್‌ನಲ್ಲಿ ರೆಟ್ರೊ-ಬರ್ನಿಂಗ್ ಅನ್ನು ಬೆಂಗಳೂರಿನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್‌, ISTRACನಿಂದ ಆದೇಶಿಸಲಾಯಿತು. ಮುಂದಿನ ಕಾರ್ಯಾಚರಣೆ ಆಗಸ್ಟ್‌ 6ರಂದು ನಡೆಯಲಿದ್ದು, ಚಂದ್ರ ಚಂದ್ರನ ಕಕ್ಷೆಗೆ ನೌಕೆಯನ್ನು ಉಳಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದೆ.

ಚಂದ್ರನ ಗುರುತ್ವಾಕರ್ಷಣೆಯಲ್ಲಿ ವಾಹನವನ್ನು ಸೆರೆ ಹಿಡಿಯಲು ವಾಹನದ ವೇಗವನ್ನು ಕಡಿಮೆಗೊಳಿಸಲಾಯಿತು. ವೇಗವನ್ನು ಕಡಿಮೆ ಮಾಡಲು ಇಸ್ರೋ ವಿಜ್ಞಾನಿಗಳು ವಾಹನದ ಥ್ರಸ್ಟರ್‌ಗಳನ್ನು ಕೆಲಕಾಲ ಉರಿಸಿದರು. ಇಸ್ರೋ ಎಕ್ಸ್ ಪೋಸ್ಟ್ ನಲ್ಲಿ ಈ ಮಾಹಿತಿಯನ್ನು ನೀಡಿದೆ.

Exit mobile version