Site icon PowerTV

ತಾಯಿಯಿಂದ ಬೇರ್ಪಟ್ಟ ಮುದ್ದಾದ ಮರಿಯಾನೆ ಸಾವು

ಹಾಸನ : ತಾಯಿಯಿಂದ ಬೇರ್ಪಟ್ಟಿದ್ದ ಮುದ್ದಾದ ಮರಿಯಾನೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕಾನನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಫಿ ತೋಟದಲ್ಲಿ ಹೆಣ್ಣಾನೆ ಮೃತಪಟ್ಟಿದೆ. ಎರಡು ಬಾರಿ ಕಾಡಾನೆ ಗುಂಪಿನೊಂದಿಗೆ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೇರಿಸಿದ್ದರು. ಆದರೆ, ಎರಡು ಬಾರಿಯೂ ಕಾಡಾನೆ ಹಿಂಡಿನೊಂದಿಗೆ ಮರಿಯಾನೆ ಹೋಗಲಿಲ್ಲ. ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದ ಕಾಫಿ ತೋಟದಲ್ಲೇ ಉಳಿದಿತ್ತು.

ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮರಿಯಾನೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಾಂತರ ಮಾಡಿದ್ದರು. ಅರೇಹಳ್ಳಿ ಬಳಿ ಮರಿಯಾನೆಯನ್ನು ಆನೆ ಗುಂಪಿಗೆ ಬಿಟ್ಟಿದ್ದರು. ಆದರೆ, ಗುಂಪಿಗೆ ಸೇರದೆ ರಸ್ತೆಯಲ್ಲಿ ಅಲೆದಾಡುತ್ತಿದ್ದ ಮರಿಯಾನೆ, ಇಂದು ಕಾಫಿ ತೋಟದಲ್ಲಿ ಶವಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version