Site icon PowerTV

ಮೃತರಿಗೆ 25 ಲಕ್ಷ ಪರಿಹಾರ, ಸರ್ಕಾರಿ ನೌಕರಿ ಕೊಡ್ಬೇಕು : ಪ್ರಮೋದ್ ಮುತಾಲಿಕ್

ಚಿತ್ರದುರ್ಗ : ಇದು ಐದು ಸಾವಲ್ಲ, ಇದು ಸರ್ಕಾರದ ಐದು ಕೊಲೆ. ರಾಜ್ಯ ಸರ್ಕಾರದ ಬೇಜವಬ್ದಾರಿಯಿಂದ ಐದು ಕೊಲೆ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಚಿತ್ರದುರ್ಗದಲ್ಲಿ ಕವಾಡಿಗರಹಟ್ಟಿ ದುರಂತ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರದ ಬೇಜವಬ್ದಾರಿ ಎದ್ದು ಕಾಣುತ್ತಿದೆ. ಘಟನೆ ನಡೆದು ವಾರ ಆಗಿದೆ ಇಂದು ಆರೋಗ್ಯ ಸಚಿವರು ಬಂದಿದ್ದಾರೆ. ಮೊದಲು ಹೆಲ್ತ್ ಮಿನಿಸ್ಟರ್ ನಡೆಗೆ ಖಂಡನೆ ಇದೆ ಎಂದು ಗುಡುಗಿದ್ದಾರೆ.

ಜಿಲ್ಲಾsಸ್ಪತ್ರೆ ಅವ್ಯವಸ್ಥೆಯ ಆಗರ

ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಏನೇನೂ ಇಲ್ಲ ಎಂಬುದಕ್ಕೆ ಜ್ವಲಂತ ಸಾಕ್ಷಿ ಚಿತ್ರದುರ್ಗ. ವಾಂತಿ ಭೇದಿಗೆ ಚಿಕಿತ್ಸೆ ನೀಡುವ ಸೌಕರ್ಯ ಇಲ್ಲದೆ ಖಾಸಗಿ ಆಸ್ಪತ್ರೆಗೆ ಕಳಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ವೈದ್ಯರು, ನರ್ಸ್ ಗಳು ಉತ್ತಮ ಕರ್ತವ್ಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬೇರೆ ವೈದ್ಯರನ್ನು ಕಳಿಸಲು, ಔಷಧ ಕಳಿಸಲು ಆಗಿಲ್ಲ ಎಂದು ದೂರಿದ್ದಾರೆ.

ನೀರು ಯಾಕೆ ಕಲುಷಿತಗೊಂಡಿದೆ

ಜಿಲ್ಲಾ ಕೇಂದ್ರದಲ್ಲಿ 500 ಜನರಿಗೆ ಚಿಕಿತ್ಸೆ ನೀಡಲು ಆಗಿಲ್ಲ. ಇದೊಂದು ಬಹಳ ದೊಡ್ಡ ದುರಂತ. ಮೃತರಿಗೆ 25 ಲಕ್ಷ ಪರಿಹಾರ ನೀಡಿ, ಸರ್ಕಾರಿ ನೌಕರಿ ನೀಡಬೇಕು. ವಾಟರ್ ಟ್ಯಾಂಕ್ ಸ್ವಚ್ಛತಾ ಬಿಲ್ ತೆಗೆದುಕೊಳ್ಳುತ್ತಾರೆ. ನೀರು ಯಾಕೆ ಕಲುಷಿತಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಿನ ಟ್ಯಾಂಕರ್ ಸ್ವಚ್ಛತೆಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

FSL ವರದಿ ಬಗ್ಗೆ ಸಂಶಯ

ಈ ಘಟನೆಯ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಈ ಘಟನೆ ಮುಚ್ಚಿ ಹಾಕುವ ಯತ್ನ ಇರುತ್ತದೆ. ಎಫ್​ಎಸ್​ಎಲ್ (FSL) ವರದಿ ಬಗ್ಗೆ ಸಂಶಯ ಇದೆ. ಇದರ ಹಿಂದೆ ಇನ್ನೇನೋ ಇದೆ, ಬೇರೆ ಕಡೆ ಎಫ್​ಎಸ್ಎಲ್ಐ(FSL) ಪರೀಕ್ಷೆ ಮಾಡಬೇಕಿದೆ ಎಂದು ಹೇಳಿದ್ದಾರೆ.

Exit mobile version