Site icon PowerTV

10 ಬಿಟ್ಟು 12 ಲಕ್ಷ ಕೊಟ್ರೆ ಅವರಿಗೆ ಪೋಸ್ಟಿಂಗ್ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : 10 ಬಿಟ್ಟು 12 ಲಕ್ಷ ಕೊಟ್ರೆ ಅವರಿಗೆ ಪೋಸ್ಟಿಂಗ್ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಪ್ರಮುಖ ಪೋಸ್ಟ್​ಗೂ ಹರಾಜು ನಡೆದಿದೆ. ಇದರ ಬಗ್ಗೆ ಯಾವದೇ ಅನುಮಾನ ‌ಇಲ್ಲ ಎಂದು ವರ್ಗಾವಣೆ ವಿಚಾರವಾಗಿ ಗಂಭೀರ ಆರೋಪ ಮಾಡಿದ್ದಾರೆ.

ನೀವು ಯಾವುದೇ ಅಧಿಕಾರಿ ಮಾತನಾಡಿಸಿ ಹೇಳ್ತಾರೆ. ಯಾರೂ ಹೆಚ್ಚು ಹಣ ಕೊಡ್ತಾರೆ ಅವರಿಗೆ ಪೋಸ್ಟಿಂಗ್. ಇದು ಅತ್ಯಂತ ಭ್ರಷ್ಟ ಸರ್ಕಾರ. ಅದಕ್ಕಾಗಿಯೇ ಶಾಸಕರು‌ ಬಂಡೇಳೋ ಕೆಲಸ ಆಗ್ತಿದೆ. ಸರ್ಕಾರ ಪರಿಹಾರವೂ ಕೊಡ್ತಿಲ್ಲ ಎಂದು ಗುಡುಗಿದ್ದಾರೆ.

ಸುಳ್ಳು ಹೇಳೋ ಸರ್ಕಾರ

ಮಳೆ ಬಂದು ರಸ್ತೆಗಳು ಹಾನಿಯಾಗಿವೆ. ನಯಾಪೈಸೆ ದುಡ್ಡು ಕೊಟ್ಟಿಲ್ಲ. ಯಾವುದೇ ಅಭಿವೃದ್ಧಿ ಕೆಲಸಕ್ಕೆ ಹಣ ಕೊಡ್ತಿಲ್ಲ‌. ಅಧಿಕಾರಿಗಳ ಪೋಸ್ಟಿಂಗ್ ಬ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದರ ಮೇಲೆ ಯಾವುದೇ ಅನುಮಾನ ಇಲ್ಲ. ಬಸ್ ಫ್ರೀ ಅಂತಾರೆ, ಅದಕ್ಕೆ ರಸ್ತೆ ಬೇಕು. ಅದಕ್ಕೆ ದುಡ್ಡು ಕೊಡಲ್ಲ ಅಂದ್ರೆ ಏನು ಅರ್ಥ? ಇದು ಜನವಿರೋಧಿ ಸರ್ಕಾರ, ಸುಳ್ಳು ಹೇಳೋ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಭಿವೃದ್ಧಿ ಮರೀಚಿಕೆಯಾಗಿದೆ

ಇವತ್ತು ವಿದ್ಯುತ್ ಕೊಡೋದಕ್ಕೆ ಕೇಂದ್ರ ಸರ್ಕಾದ ಕಾರಣ. ಆದರೆ, ರಾಜ್ಯ ಸರ್ಕಾರ ವಿದ್ಯುತ್ ನಾವೇ ಕೊಡ್ತೀವಿ ಅಂತ ದುರಹಂಕರಾದಿಂದ ಮಾತನಾಡ್ತಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಜನ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Exit mobile version