Site icon PowerTV

ಸರ್ಕಾರ ನಡೆಸೋರು ನಾವು, ನಮಗೆ ಯಾವುದು ಸರಿನೊ ಅದನ್ನು ಮಾಡ್ತೀವಿ : ಸಚಿವ ಪರಮೇಶ್ವರ್​

ಬೆಂಗಳೂರು : ಕುಮಾರಸ್ವಾಮಿ ಏನು ಬೇಕಾದ್ರೂ ಕಮೆಂಟ್ ಮಾಡಲಿ, ಸರ್ಕಾರ ನಡೆಸುವವರು ನಾವು, ನಮಗೆ ಯಾವುದು ಸರಿ ಕಾಣುತ್ತೋ ಅದನ್ನ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕೆ ಆರೋಪಕ್ಕೆ ತಿರುಗೇಟು ನೀಡಿದರು.

ಇದನ್ನೂ ಓದಿ: ಲೋಕಸಭೆ: ಹೆಚ್ಚು ಸ್ಥಾನ ಗೆಲ್ಲಲು ರಾಜ್ಯದ ಸಂಸದರಿಗೆ ಮೋದಿ ಮಹತ್ವದ ಸಲಹೆ!

ನಗರದಲ್ಲಿ ಮಾತನಾಡಿ ಅವರು, ಗೃಹ ಇಲಾಖೆಯಲ್ಲಿ 1200 ಇನ್ಸ್ಪೆಕ್ಟರ್ ಗಳಿದ್ದಾರೆ ಅಷ್ಟು ಜನರನ್ನು ನಾವು ವರ್ಗಾವಣೆ ಮಾಡುವುದಕ್ಕೆ ಹೋಗುವುದಿಲ್ಲ, ಆಯ್ಕೆಯಾದ ಕೆಲವೇ ಪೊಲೀಸರನ್ನು ವರ್ಗಾವಣೆ ಮಾಡುತ್ತಿದ್ದೇವೆ, ಯಾವ ಏರಿಯಾದಲ್ಲಿ ಯಾರನ್ನು ಹಾಕಿದರೆ ಅಪರಾಧ ಪ್ರಕರಣಗಳು ಹತೋಟಿಗೆ ಬರುತ್ತದೆ ಎನ್ನುವ ದೃಷ್ಟಿಕೋನ ಇಟ್ಟುಕೊಂಡು ವರ್ಗಾವಣೆ ಮಾಡುತ್ತೇವೆ.

ಇವರು ಹೇಳಿದ ಹಾಗೆ ಮಾಡೋಕಾಗಲ್ಲ, ಇವರು ಕೂಡ ಮುಖ್ಯಮಂತ್ರಿಗಳಾಗಿದ್ದರು, ಆಗಲೂ ನಾನೇ ಗೃಹ ಸಚಿವನಾಗಿದ್ದೆ ಅವರು ಯಾವ ರೀತಿ ಸಲಹೆ ಸೂಚನೆಗಳನ್ನ ಮುಖ್ಯಮಂತ್ರಿಗಳಾಗಿದ್ದಾಗ ಕೊಡ್ತಿದ್ರು ಎಂಬುದನ್ನು ನಾನು ಹೇಳಲ್ಲ, ಅದನ್ನ ಹೇಳುವುದು ಕೂಡ ಚೆನ್ನಾಗಿ ಕಾಣುವುದಿಲ್ಲ.

ಹಾಗೆ, ಈಗ ನಡೆಯುತ್ತಿರುವ ವರ್ಗಾವಣೆ ಪ್ರಕ್ರಿಯೆಯಲ್ಲಿ ಕೆಲ ವರ್ಗಾವಣೆ ಸರಿ ಕಾಣಲಿಲ್ಲ ಎನ್ನುವ ಕಾರಣಕ್ಕಾಗಿ ಸ್ಥಗಿತಗೊಳಿಸಿದ್ದೇವೆ, ಎಲ್ಲಿಗೆ ಯಾರನ್ನ ಹಾಕಿದರೇ ಸರಿಹೋಗುತ್ತದೆ ಎಂಬುದನ್ನು ಪರಿಶೀಲಿಸಿ ವರ್ಗಾವಣೆ ಮಾಡುತ್ತೇವೆ ಎಂದು ಅವರು ಹೇಳಿದರು.

Exit mobile version