Site icon PowerTV

ಪ್ರಾಂಶುಪಾಲನಿಂದ ಬಾಲಕಿಯ ಅತ್ಯಾಚಾರ

ಬೆಂಗಳೂರು : ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಕಾಮೂಕ. ಕುಟುಂಬಸ್ಥರ ಆರೋಪದ ಮೇಲೆ ಶಾಲಾ ಪ್ರಾಂಶುಪಾಲನನ್ನು ಬಂಧಿಸಿದ ವರ್ತೂರು ಪೋಲಿಸರು. 

ನಿನ್ನೆ ಎಂದಿನಂತೆ ಶಾಲೆಗೆ ತೆರಳಿದ್ದ 10 ವರ್ಷದ ಬಾಲಕಿಯನ್ನು ಖಾಲಿ ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಶಾಲೆಯ ಪ್ರಾಂಶುಪಾಲ.ಅತ್ಯಾಚಾರ ಎಸಗಿರುವ ಅಮಾನವೀಯ ದುರ್ಘಟನೆ, ನಗರದ ವರ್ತೂರು ಸಮೀಪದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಇದನ್ನು ಓದಿ : ಎರಡನೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ವೀಕ್ : ಬಸವರಾಜ ಬೊಮ್ಮಾಯಿ

ಬಳಿಕ ಮನೆಗೆ ತೆರಳಿದಾಗ ಹೊಟ್ಟೆ ನೋವು ತಾಳದೆ ಒದ್ದಾಡಿದ ವಿದ್ಯಾರ್ಥಿನಿ.

ಬಾಲಕಿಯ ಒದ್ದಾಟವನ್ನು ಕಂಡು ಅವಳ ತಾಯಿ ಆಸ್ಪತ್ರೆಗೆ ಕರೆದೊಯ್ದಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವರ್ತೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೋಲಿಸರು.

Exit mobile version