Site icon PowerTV

ವೀಲ್ಹಿಂಗ್ ಶೋಕಿಗಾಗಿ ಬೈಕ್ ಕಳ್ಳತನ ; ಇಬ್ಬರ ಬಂಧನ

ಮೈಸೂರು :  ವೀಲ್ಹಿಂಗ್ ಶೋಕಿಗಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೋಲಿಸರು. ಈ ಹಿನ್ನೆಲೆ ಪೋಲೀಸರು ಯಶಸ್ವಿ ಕಾರ್ಯಚರಣೆ ನೆಡೆಸಿದ್ದು, ನಗರ ಪೋಲಿಸ್ ಆಯುಕ್ತ ರಮೇಶ್ ಬಾನೊತ್ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಧನುಷ್ (19), ಹಾಗೂ ನಿತಿನ್ (19) ಬಂಧಿತ ಆರೋಪಿಗಳು, ಮೈಸೂರಿನ ಶ್ರೀರಾಂಪುರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು, ಈ ವೇಳೆ ಪೋಲಿಸರ ಕೈಗೆ ಸಿಕ್ಕಿ ಬಿದ್ದಿರುವ ಆರೋಪಿಗಳು.

ಇದನ್ನುಓದಿ : ಇಂದಿನಿಂದ ಲಾಲ್​ ಭಾಗ್​ ನಲ್ಲಿ ಫಲಪುಷ್ಪ ಪ್ರದರ್ಶನ!

ವಿದ್ಯಾರಣ್ಯಪುರಂ ಠಾಣೆ ಹಾಗೂ ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಬೈಕ್ ಕಳವು ಪ್ರಕರಣ ದಾಖಲು, ಈ ಹಿನ್ನೆಲೆ ಈ ಭಾರಿ ಒಂದು ಬೈಕ್ ಕದ್ದು ಅದೇ ಬೈಕ್​ನಲ್ಲಿ ತೆರಳಿ ಮತ್ತೊಂದು ಬೈಕ್ ಕದಿಯಲು ಸಂಚು ಹಾಕಿದ್ದ ಆರೋಪಿಗಳು. ಈ ವೇಳೆ ಕಳ್ಳರನ್ನು ಬಂಧಿಸಿ ಯಶಸ್ವಿ ಕಾರ್ಯಚರಣೆ ಮೇರೆದ ಕುವೆಂಪುನಗರ ಠಾಣೆ ಪೋಲಿಸರು.

ಬಳಿಕ ವಿಚಾರಣೆ ವೇಳೆ ಬೈಕ್ ವೀಲ್ಹಿಂಗ್ ಮಾಡುವ ಸಲುವಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಸತ್ಯ ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಗಳಿಂದ 2.5ಲಕ್ಷ ಮೌಲ್ಯದ 4ಬೈಕ್ ವಶಕ್ಕೆ ಪಡೆದ ನಗರದ ಪೋಲಿಸರು.

Exit mobile version