Site icon PowerTV

ತಿರುಪತಿ ಲಡ್ಡುಗೆ ತುಪ್ಪ ಕಳಿಸಲು KMF ರೆಡಿ

ಬೆಂಗಳೂರು : ತಿರುಪತಿ ತಿರುಮಲ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಪೂರೈಕೆ ಮಾಡುವುದಿಲ್ಲ ಎಂಬ ವಿಚಾರದ ಬೆನ್ನಲ್ಲೇ, ಟಿಟಿಡಿಗೆ ಕೆಎಂಎಫ್ ಪತ್ರ ಬರೆದಿದೆ.

ನಾವು ನಿಮಗೆ ತುಪ್ಪ ಪೂರೈಕೆ ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ಆದರೆ, ನಮ್ಮ ಜೊತೆ ಸಭೆ ನಡೆಸಿ ದರದ ಬಗ್ಗೆ ಚರ್ಚಿಸುವಂತೆ ಸಲಹೆ ನೀಡಿದೆ.

ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಪತ್ರದಲ್ಲಿ, ‘ನಾವು ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡುತ್ತೇವೆ. ನಮ್ಮದು ಸಹಕಾರ ಸಂಸ್ಥೆಯಾಗಿದ್ದು, ಟೆಂಡರ್​ನಲ್ಲಿ ಭಾಗಿಯಾಗಿಲ್ಲ. ತುಂಬಾ ಗುಣಮಟ್ಟದ ತುಪ್ಪವನ್ನು ನಂದಿನಿ ಗ್ರಾಹಕರಿಗೆ ತಲುಪಿಸುತ್ತಾ ಬಂದಿದೆ. ಹೀಗಾಗಿ, ಟಿಟಿಡಿಗೂ ಕೂಡ ತುಪ್ಪ ನೀಡಲು ನಾವು ಖುಷಿಯಿಂದ ಕಾತರರಾಗಿದ್ದೇವೆ’ ಎಂದು ಹೇಳಿದೆ.

ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ತುಪ್ಪವನ್ನು ಸರಬರಾಜು ಮಾಡಲು ಆಗುವುದಿಲ್ಲ ಎಂದು ಕೆಎಂಎಫ್​ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದರು. ಇದಕ್ಕೆ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ, ಲಡ್ಡು ತಯಾರಿಕೆಗೆ ನಿಲ್ಲಿಸಲಾಗಿದ್ದ ತುಪ್ಪ ಸರಬರಾಜು ಮಾಡುವುದಾಗಿ ಹೇಳಿದೆ.

Exit mobile version