Site icon PowerTV

ಸದಸ್ಯರು ಪೇಪರ್ ಎಸೆಯೋದು ಸಹಜ : ಕಾಗೇರಿ ಸಮರ್ಥನೆ

ಬೆಂಗಳೂರು : ಸ್ಪೀಕರ್​​​ ಯು.ಟಿ ಖಾದರ್ ಅವ್ರು ನಮ್ಮ ಹತ್ತು ಜನ ಶಾಸಕರನ್ನು ಅಮಾನತು ಮಾಡಿದ್ರು. ಸದನವನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದು ಮಾಜಿ ಸ್ಪೀಕರ್​​​ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಉಚ್ಚಾಟನೆಯನ್ನು ಹಿಂದೆ ನಾನು ಮಾಡಿದ್ದೇನೆ. ಸದನದ ಒಳಗೆ ಒಬ್ಬ ಸದಸ್ಯ ಅಂಗಿ ಬಿಚ್ಚಿಕೊಂಡು ಓಡಾಡಿದ್ರೆ, ಸದನದ ಗೌರವ ಉಳಿಯುತ್ತಾ? ಎಂದು ಪ್ರಶ್ನಿಸಿದ್ದಾರೆ.

ಶಾಸಕರು ಪೇಪರ್ ಎಸೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಸ್ಪೆಂಡ್ ಆಗಿರುವ ಉದಾಹರಣೆಗಳು ನನ್ನ ಬಳಿ ಇವೆ. ವಿಶೇಷವಾಗಿ ಇದರಲ್ಲಿ ಸಂಸದೀಯ ಸಚಿವರ ಹಾಗೂ ಮುಖ್ಯಮಂತ್ರಿ ಗಳ ಪಾತ್ರ ಇದೆ. ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ವರ್ಷಗಳಿಂದ ಆಡಳಿತ ಮಾಡಿದೆ. ಪೇಪರ್ ಹರಿದು ಹಾಕಿರುವ ಚಿಕ್ಕ ಘಟನೆಗೆ ಅಮಾನತ್ತಿನ ಶಿಕ್ಷೆ ಒಪ್ಪುವಂತದ್ದಲ್ಲ ಎಂದು ಹೇಳಿದ್ದಾರೆ.

ಸ್ಪೀಕರ್ ಊಟಕ್ಕೆ ಹೋದ್ರೆ

ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಬೇಕಾದರೆ ಅದು ನಮ್ಮಿಂದ ಮಾತ್ರ ಸಾಧ್ಯ. ಡೆಪ್ಯುಟಿ ಸ್ಪೀಕರ್ ಪೀಠದಲ್ಲಿ ಕೂರಿಸಿ, ಸ್ಪೀಕರ್ ಊಟಕ್ಕೆ ಹೋದ್ರೆ. ಅಲ್ಲಿರುವ ಸದಸ್ಯರು ಪೇಪರ್ ಎಸೆಯೋದು ಸಹಜ ಎಂದು ಶಾಸಕರ ಪೇಪರ್ ಎಸೆತವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

Exit mobile version