Site icon PowerTV

ಗ್ರಾಮ ಪಂಚಾಯಿತಿ ಚುನಾವಣೆ: ಬಿಜೆಪಿ ಸದಸ್ಯೆಯ ಅಪಹರಣಕ್ಕೆ ಯತ್ನ

ಕಲಬುರಗಿ : ಸಿನಿಮೀಯ ಶೈಲಿಯಲ್ಲಿ ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತ ಸದಸ್ಯೆಯ ಅಪಹರಣಕ್ಕೆ ಯತ್ನ, ಘಟನೆ ತಾಲೂಕಿನ ಸಾವಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ನಡೆದಿದೆ.

ಆಗಸ್ಟ್ 4 ರಂದು ಸಾವಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಬೆಂಬಲಿತ ಶಿವಕುಮಾರ್ ಮಲ್ಲು ಹಾಗೂ ಕಡಗಂಚಿ ಸೇರಿದಂತೆ ಇತರರಿಂದ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯೆ ನಾಗಮ್ಮ ಕೊಂಡೆದ್ ಅವರ ಅಪಹರಣಕ್ಕೆ ಯತ್ನಿಸಿದ ಕಿಡಿಗೇಡಿಗಳು.

ಇದನ್ನು ಓದು : 200 ಯೂನಿಟ್​ ಮಿತಿಯೊಳಗೆ ಬಳಸಿದವರಿಗೆ ಬಿಲ್​ ಶಾಕ್!: ಬೆಸ್ಕಾಂ ಎಂಡಿ ಸ್ಪಷ್ಟನೆ

ಮಾರಕಸ್ತ್ರ ಮತ್ತು ಬಡಿಗೆ ಹಿಡಿದು ಬಂದ 5/6 ಜನರು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗಮ್ಮನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ ಅಪಹರಣಕಾರರು. ಈ ವೇಳೆ ಸ್ಥಳಕ್ಕೆ ಬಂದ ನಾಗಮ್ಮ ಪುತ್ರ ಮಲ್ಲಿಕಾರ್ಜುನ ಮತ್ತು ಗ್ರಾಮಸ್ಥರು. ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಬಂದ ತಕ್ಷಣ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ ಅಪಹರಣಕಾರರು.

ಈ ವೇಳೆ ನಾಲ್ವರು ಎಸ್ಕೆಪ್ ಆಗಿದ್ದು , ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಓರ್ವ ಅಪಹರಣಾಕಾರ ಶಿವಕುಮಾರ್​. ಶಿವಕುಮಾರ್​ನನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಊರಿನ ಗ್ರಾಮಸ್ಥರು. ಘಟನೆಯಲ್ಲಿ ಸದಸ್ಯೆ ನಾಗಮ್ಮ ಮತ್ತು ಪುತ್ರನಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಹಿನ್ನೆಲೆ ಸಬ್ ಅರ್ಬನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

Exit mobile version