Site icon PowerTV

ಆಸ್ಕರ್ ಪ್ರಶಸ್ತಿಯ ಚಿತ್ರಕ್ಕೆ ಕಥೆಯಾದ ‘ಬೆಳ್ಳಿ’ ಮೊದಲ ಮಹಿಳಾ ಕಾವಡಿ ಗೌರವ!

ತಮಿಳುನಾಡು : ಆಸ್ಕರ್ ಪ್ರಶಸ್ತಿ ಪುರಸ್ಕೃತ ‘ದಿ ಎಲಿಫ್ಯಾಂಟ್ ವಿಸ್ಪರರ್’ ಸಾಕ್ಷ್ಯಚಿತ್ರದ ಪ್ರೇರಣೆಯಾಗಿದ್ದ ‘ಬೆಳ್ಳಿ’ ಅವರನ್ನು ಮೊದಲ ಸರ್ಕಾರಿ ಮಹಿಳಾ ಕಾವಡಿಯಾಗಿ ತಮಿಳುನಾಡು ಸರ್ಕಾರ ನೇಮಕ ಮಾಡಿದೆ.

ಇದನ್ನೂ ಓದಿ: ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ಬಳಕೆ : ಚೀನಾ ನಿರ್ಧಾರ!

ಸರ್ಕಾರ ತನ್ನ ಹೇಳಿಕೆಯಲ್ಲಿ, ‘ಬೆಳ್ಳಿ ಅವರು ಆನೆ ಮರಿಗಳನ್ನು ಸಾಕಿ-ಸಲಹಿದ ಪರಿಗೆ ಅವರನ್ನು ರಾಜ್ಯದ ಮೊದಲ ಮಹಿಳಾ ಕಾವಡಿಯಾಗಿ ನೇಮಕ ಮಾಡಲಾಗಿದೆ’ ಎಂದು ತಿಳಿಸಿದೆ. ಹೀಗಾಗಿ ತಾತ್ಕಾಲಿಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಿ, ಈಗ ರಾಜ್ಯದ ಮೊದಲ ಸರ್ಕಾರಿ ಮಹಿಳಾ ಕಾವಡಿಯಾಗಿ ನೇಮಕಗೊಂಡಿದ್ದಾರೆ.

ಇವರು ನೀಲಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಹುಲಿ ಅಭಯಾರಣ್ಯದಲ್ಲಿರುವ ತೆಪ್ಪಕಾಡು ಆನೆ ಬಿಡಾರದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

Exit mobile version