Site icon PowerTV

ನಡುರಸ್ತೆಯಲ್ಲೇ ಓರ್ವ ಪುರುಷ, ಮೂವರು ಮಹಿಳೆಯರ ನಡುವೆ ಡಿಶುಂ.. ಡಿಶುಂ..!

ರಾಮನಗರ : ಜಮೀನು ವಿಚಾರಕ್ಕಾಗಿ‌ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ರಾಮನಗರ ಜಿಲ್ಲೆಯ ಕುದೂರಿನ ಹೊನ್ನಾಪುರ ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಗೋಮಾಳ ಜಮೀನು ಪ್ರಶ್ನಿಸಿ‌ ನಡುರಸ್ತೆಯಲ್ಲೇ ಓರ್ವ ಪುರುಷ,‌ ಮೂರು ಮಹಿಳೆಯರ ನಡುವೆ ಗಲಾಟೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಿಂಗಾಯತ ಸಮುದಾಯದವರು ಹಲ್ಲೆ ಮತ್ತು ಜಾತಿನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ‌ ಸಮುದಾಯ ಪ್ರಕರಣ ದಾಖಲಿಸಿದೆ. ಅದೇ ರೀತಿ ವಿನಾಕಾರಣ ಮಹಿಳೆ ಮೇಲೆ ಹಲ್ಲೆ ಮಾಡಿರುವ ಕುರಿತಾಗಿ ದಲಿತ ಸಮುದಾಯ ವಿರುದ್ಧವೂ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಎರಡೂ ಕಡೆಯ ಪ್ರಕರಣದ ಕುರಿತು ಕುದೂರು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

Exit mobile version