Site icon PowerTV

ಕಾಂಗ್ರೆಸ್​ ಪಕ್ಷದಲ್ಲಿ ಆ ಬಣ, ಈ ಬಣ ಅಂತೇನಿಲ್ಲ : ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ನಾಡಗೌಡ

ಬೆಂಗಳೂರು : ಕಾಂಗ್ರೆಸ್​ ಪಕ್ಷದಲ್ಲಿ ಆ ಬಣ, ಈ ಬಣ ಅಂತೇನಿಲ್ಲ. ಇರೋದು ಒಂದೇ ಬಣ. ಕಾಂಗ್ರೆಸ್​ ಬಣ ಎನ್ನುವ ಮೂಲಕ ಶಾಸಕ ಸಿ.ಎಸ್​ ನಾಡಗೌಡ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದರು.

ಸಚಿವರ ಕಾರ್ಯವೈಖರಿ ಬಗ್ಗೆ ರೆಬೆಲ್ ಆಗಿದ್ದ ಶಾಸಕ ಸಿ.ಎಸ್. ನಾಡಗೌಡ ಅವರು ಪವರ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಮಾತುಕತೆ ನಡೆಸಿದ್ದಾರೆ.

ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ನಿಜ. ಆದರೆ, ಅಸಮಾಧಾನದಿಂದ ಬರೆದ ಪತ್ರ ಅಲ್ಲ. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು 32 ಶಾಸಕರು ಹೇಳಿದ್ವಿ. ವರ್ಗಾವಣೆ ವಿಚಾರ ದೊಡ್ಡ ವಿಷಯವೇ ಅಲ್ಲ ಎಂದು ಮಾಹಿತಿ ನೀಡಿದ್ದಾರೆ.

ಎಲ್ಲರನ್ನೂ ತೃಪ್ತಿ‌ ಪಡೆಸೋಕೆ ಆಗಲ್ವಲ್ಲಾ?

ಎಲ್ಲರನ್ನೂ ತೃಪ್ತಿ‌ ಪಡೆಸೋಕೆ ಆಗಲ್ವಲ್ಲಾ? ನಾವೆಲ್ಲಾ ಸಿಎಲ್​ಪಿ ಸಭೆಯಲ್ಲಿ ಮುಕ್ತವಾಗಿ ಹೇಳಿದ್ದೀವಿ. ಯಾವ ಸಚಿವರ ವಿರುದ್ಧವೂ ನಮಗೆ ಅಸಮಾಧಾನ ಇಲ್ಲ. ನಮ್ಮ ಸರ್ಕಾರ ಬಂದು ಎರಡು ತಿಂಗಳು ಆಗಿದೆ ಅಷ್ಟೇ. ಉಚಿತಗ್ಯಾರಂಟಿಗಳ ಬಗ್ಗೆ ಸಿಎಂ ಸವಿಸ್ತಾರವಾಗಿ ತಿಳಿಸಿದ್ದಾರೆ ಎಂದು ನಾಡಗೌಡ ಹೇಳಿದ್ದಾರೆ.

Exit mobile version