Site icon PowerTV

ಸಿದ್ದರಾಮಯ್ಯ ಏನು ನಿದ್ದೆ ಮಾಡ್ತಾ ಇದ್ದಾರ? : ಹೆಚ್.ಸಿ ಬಾಲಕೃಷ್ಣ

ರಾಮನಗರ : ಯಾರಿಂದ ಕೂಡ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. 40 ಜನ ಶಾಸಕರನ್ನು ಕರೆದುಕೊಂಡು ಹೋಗೊಕೆ ಆಗುತ್ತಾ? ಸಿದ್ದರಾಮಯ್ಯ ಅವರು ಏನು ನಿದ್ದೆ ಮಾಡ್ತಾ ಇದ್ದಾರ? ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿದರು.

ಸರ್ಕಾರ ಬೀಳಿಸುವ ಕೆಲಸ ನಡೀತಿದೆ ಎಂಬ ವಿಚಾರವಾಗಿ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಂಗಾಪುರ್ ನಲ್ಲಿ ಯಾರು ಕೂತಿದ್ದಾರೆ? ಹಳೆ ಸ್ನೇಹಿತರು ಅಲ್ವಾ?ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಟ್ರಬಲ್ ಶೂಟರ್ ಇದ್ದಾರೆ

ಸಿದ್ದರಾಮಣ್ಣ ಏನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಇಲ್ಲವಲ್ಲ. ಎಲ್ಲಾ ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಕೇಳ್ತಾರೆ. ಜೊತೆಗೆ ಸಣ್ಣಪುಟ್ಟ ಏನೇ ಆದ್ರೂ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಇದ್ದಾರೆ. ಅವರು ಯಾವುದೇ ಹೋಟೆಲ್ ನಲ್ಲಿ ಇಲ್ಲ. ಡಿಕೆ ಶಿವಕುಮಾರ್ ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಬಿಜೆಪಿ ಅವರ ಜೊತೆ ಸೇರಿ ಸರ್ಕಾರ ಬೀಳಿಸುವ ಕೆಲಸ ಮಾಡ್ತಾ ಇದ್ದಾರೆ ಎಂಬ ಊಹಾಪೋಹ ಇದೆ. ಬಿಜೆಪಿ ಅವರ ಜೊತೆ ಸೇರಿ ಏನೋ ಮಾಡ್ತಾ ಇದ್ದಾರೆ ಅನ್ನಿಸುತ್ತೆ ಎಂದು ಕುಟುಕಿದರು.

ಇದೆಲ್ಲಾ ಅವರ ಕನಸು

ಕಾಂಗ್ರೆಸ್​ನ 5 ಗ್ಯಾಂರಂಟಿಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ. ಸ್ವತಂತ್ರ ಬಂದ ನಂತರವೂ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಆರೋಪ ಇತ್ತು. ಈಗ ಎಲ್ಲಾ ಪುಣ್ಯಕ್ಷೇತ್ರಗಳು ಹೆಣ್ಣು ಮಕ್ಕಳಿಂದ ಕೂಡಿದೆ. ಇದೆಲ್ಲವನ್ನೂ ನೋಡಿದಾಗ ವಿರೋಧ ಪಕ್ಷದವರಿಗೆ ತಲೆ ಕೆಡುತ್ತದೆ. ಇದರಿಂದ ವಿಚಲಿತರಾಗಿ ಸರ್ಕಾರ ಉಳಿಸುವ ತಂತ್ರ ಮಾಡ್ತಿದ್ದಾರೆ‌. ಇದೆಲ್ಲಾ ಅವರ ಕನಸು ಎಂದು ಚಾಟಿ ಬೀಸಿದರು.

Exit mobile version