Site icon PowerTV

ಶೋಕಿಲಾಲ್ ಪ್ರಧಾನಿ ಅಂದ್ರೆ ಅದು ಮೋದಿ: ವಿ.ಎಸ್​ ಉಗ್ರಪ್ಪ

ಬೆಂಗಳೂರು: ಮಣಿಪುರದಲ್ಲಿ ಯುವತಿಯರನ್ನ ಬೆತ್ತಲೆ ಮಾಡಿದ್ದಾರೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಇದು ಖಂಡನೀಯ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಖರ್ಗೆ ಮೈ ಬಣ್ಣದ ಬಗ್ಗೆ ವ್ಯಂಗ್ಯವಾಡಿದ ಶಾಸಕ ಆರಗ!

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಣಿಪುರ ಹಿಂಸಾಚಾರಕ್ಕೆ ಖಂಡನೀಯ ಸರ್ವೋಚ್ಚ ನ್ಯಾಯಾಲಯ  ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರಕ್ಕೆ ಚಾಟಿ ಬೀಸಿದೆ. ಬೆತ್ತಲೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗಿ 14 ದಿನಗಳಾದರೂ ಈ ಬಗ್ಗೆ ಪ್ರಕರಣ ದಾಖಲಿಸಿಲ್ಲ.

IPC ಸೆಕ್ಷನ್ 356ರ ಪ್ರಕಾರ ಮಣಿಪುರದಲ್ಲಿ ನಿಯಮ ಉಲ್ಲಂಘನೆಯಾಗಿದೆ. ಹಾಗಾಗಿ‌ ಮಣಿಪುರವನ್ನ ರಾಷ್ಟ್ರಪತಿ ಆಡಳಿತಕ್ಕೆ ನೀಡಬೇಕು. ರಾಷ್ಟ್ರದ ರಾಷ್ಟ್ರ ಪತಿಗಳು ಏನು‌ ಮಾಡ್ತಿದ್ದಾರೆ? ಇದನ್ನ ರಾಷ್ಟ್ರಪತಿಗಳು ಗಮನಿಸುತ್ತಿಲ್ಲವೇ? ಎಂದು ಪ್ರಶ್ನಸಿದರು.

ನಮ್ಮ ಪ್ರಧಾನಿಗಳು ಮೈಕಾಸುರರಾಗಿಬಿಟ್ಟಿದ್ದಾರೆ, ಮೈಕ್ ಸಿಕ್ಕಿದರೆ ಸಾಕು ಮೈಕಾಸುರರಾಗ್ತಾರೆ. ಗಲಭೆ ಪೀಡಿತ ಪ್ರದೇಶಗಳಿಗೆ ಇದುವರೆಗೂ ಭೇಟಿ ನೀಡಿಲ್ಲ. ಮಿಸ್ಟರ್ ಮೋದಿ ನೀವು ಏನ್ಮಾಡ್ತಿದ್ದೀರಾ? ಅಲ್ಲಿಗೆ ಹೋಗೋಕೆ ನಿಮಗೆ ಸಮಯ ಇಲ್ವೇ ಎಂದು ಪ್ರಶ್ನಿಸಿದ್ದಾರೆ. ಮೋದಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನ ಮುಳುಗಿಸ್ತಿದ್ದಾರೆ, ಶೋಕಿಲಾಲ್ ಪ್ರಧಾನಿ ಅಂದ್ರೆ ಅದು ಮೋದಿ ಎಂದು ಉಗ್ರಪ್ಪ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Exit mobile version