Site icon PowerTV

ಪ್ರದೀಪ್ ಈಶ್ವರ್.. ಕನಸಲ್ಲೂ ನಾನು ಬರ್ತೀನಿ : ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್.. ಕನಸಲ್ಲೂ ನಾನು ಬರ್ತೀನಿ ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್ ಕುಟುಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,  ಪ್ರದೀಪ್ ಈಶ್ವರ್ ತಾನು ಲಾಟರಿ ಎಂಎಲ್ಎ ಅಂತ ಹೇಳಿಕೊಂಡಿದ್ದಾರೆ. ಲಾಟರಿ ಮೂಲಕ ಆಗಿದ್ರೂ ಕೂಡ ಯಾರೂ ಹಾಗೆ ಹೇಳಿಕೊಳ್ಳಲ್ಲ. ವಿಶ್ವದಲ್ಲೇ ಆ ರೀತಿ ಹೇಳಿಕೊಳ್ಳುವ ಶಾಸಕ ಇವರೊಬ್ಬರೇ. ಶಾಸಕ ಪ್ರದೀಪ್ ಈಶ್ವರ್​ಗೆ ಅರಿವಿನ ಕೊರತೆ ಇದೆ ಎಂದು ಛೇಡಿಸಿದ್ದಾರೆ.

ಈಶ್ವರ್​ಗೆ ಭಯ ಬೇಡ

ಸುಧಾಕರ್  ಕಾಂಗ್ರೆಸ್ ಎಂಪಿ ಟಿಕೆಟ್ ಕೇಳಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಪ್ರದೀಪ್ ಈಶ್ವರ್​ಗೆ ಭಯ ಬೇಡ. ನಾನು ಕಾಂಗ್ರೆಸ್​ಗೆ ಬಂದ್ರೆ ಅವರಿಗೆ ಎಲ್ಲಿ ತೊಂದರೆ, ಅಭದ್ರತೆ ಆಗುತ್ತದೆ ಅಂತ ಭಯ ಬೀಳ್ತಿದ್ದಾರೆ. ನೀವು ಎಲ್ಲಿದ್ದೀರೋ ಅಲ್ಲೇ ಇರಿ. ಅಲ್ಲೇ ನಿಮ್ಮನ್ನ ಮಣಿಸುವ ಕೆಲಸ‌ ಮಾಡುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.

ನನ್ನ ಟಚ್ ಮಾಡಲಿ

ರಾಜ್ಯ ಸರ್ಕಾರ ಮಾತಾಡಿದ್ರೆ ಎಸ್​ಐಟಿ, ನ್ಯಾಯಾಂಗ ತನಿಖೆ ಅಂತ ಹೆದರಿಸುವ ಪ್ರಯತ್ನ ಮಾಡ್ತಿದೆ. ಹಾಗೆ ಮಾಡೋದಾದರೆ ನಮ್ಮದು ಕೇಂದ್ರ ಸರ್ಕಾರ ಇದೆ. ಇವರದ್ದು ಬರೀ ರಾಜ್ಯ ಸರ್ಕಾರ. 13ರಿಂದ 18ರವರೆಗೆ ನಡೆದ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿಲ್ವಾ? ಲೆಟ್ ದೆಮ್ ನನ್ನ ಟಚ್ ಮಾಡಲಿ ಆಮೇಲೆ ನಾನು ಮಾತಾಡ್ತೇನೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Exit mobile version