Site icon PowerTV

ಕೋತಿಗಳ ಕಾಟಕ್ಕೆ ಬೇಸತ್ತ ಬಳ್ಳಾರಿ ಜನರು

ಬಳ್ಳಾರಿ : ಕೆಲ ದಿನಗಳಿಂದ‌ ಬೀಡುಬಿಟ್ಟಿರುವ ಕೋತಿಗಳ ಕಾಟಕ್ಕೆ ಗಣಿನಾಡು ‌ಬಳ್ಳಾರಿ‌ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಜನರು ಬೇಸತ್ತಿದ್ದಾರೆ.

ಸರಿ ಸುಮಾರು ಮೂವತ್ತರಿಂದ ನಾಲವತ್ತು ‌ಕೋತಿಗಳು ಊರಿನಲ್ಲಿ ವಾಸವಿದ್ದು. ಮನೆಯ ಮೇಲಿನ ಯಾವುದೇ ಪದಾರ್ಥಗಳು ಒಣಗಿಸಲು ಬಿಡುತ್ತಿಲ್ಲ. ಶಾಲೆಗೆ ಹೋಗುವ ‌ಮಕ್ಕಳಿಗೂ ಹಾಗೂ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಮೇಲೂ ಹಲ್ಲೆ ಮಾಡಿವೆ.‌

ಗ್ರಾಮಸ್ಥರು ಬೇಸತ್ತು ಗ್ರಾಮ‌ ಪಂಚಾಯತಿ ಪಿಡಿಒ ಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಹಿಸಿಲ್ಲ. ಕೆಲ ಕೋತಿಗಳು ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುತ್ತಿವೆ. ಕೋತಿಗಳನ್ನು ಓಡಿಸಲು ಜನರು ಪಟಾಕಿ‌ ಸಿಡಿಸಿ ಅವುಗಳನ್ನು ಓಡಿಸುತ್ತಿದ್ದಾರೆ. ಈಗಾಲಾದರೂ ಅಧಿಕಾರಿಗಳು ‌ಕೂಡಲೇ‌ ಎಚ್ಚತ್ತೆಕೊಂಡು ಕೋತಿಗಳನ್ನು ಸೆರೆಹಿಡಿಯಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Exit mobile version