Site icon PowerTV

ಲೇಟ್ ಆಗಿ ಟೀ ಕೊಟ್ಟಿದ್ದಕ್ಕೆ ಹೆಂಡ್ತಿಯನ್ನೇ ಕೊಂದ ಗಂಡ!

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

ಬೆಳಗ್ಗೆ ಟೀ ಮಾಡುವ ವಿಚಾರದಲ್ಲಿ ಗಂಡ ಹಾಗೂ ಹೆಂಡತಿ ನಡುವೆ ಜಗಳ ಏರ್ಪಟ್ಟಿತ್ತು. ಹೆಂಡತಿ ಟೀ ಮಾಡಲು ಸ್ವಲ್ಪ ತಡ ಮಾಡಿದ್ದಳು. ಇದರಿಂದ ಕುಪಿತಗೊಂಡ ಗಂಡ ಗಲಾಟೆ ಮಾಡಿದ್ದಾನೆ.

ಕ್ಷುಲ್ಲಕ ಕಾರಣದಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿ ಮೇಲೆ ಕುಪಿತನಾದ ಪತಿರಾಯ 22 ವರ್ಷದ ತನ್ನ ಹೆಂಡತಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಯನ್ನು ಕತ್ತು ಕಿಸುಕಿ ಕೊಲೆ ಮಾಡಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

Exit mobile version