Site icon PowerTV

ಎಣ್ಣೆ ಸಾಲ ಕೊಡದಿದ್ದಕ್ಕೆ ಬಾರ್ ಸಿಬ್ಬಂದಿ ಮೇಲೆ ಹಲ್ಲೆ

ರಾಮನಗರ : ಎಣ್ಣೆ ಸಾಲ ಕೊಡದಿದ್ದಕ್ಕೆ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದೆ.

ಹೊಂಗನೂರು ಗ್ರಾಮದ ರಾಘವೇಂದ್ರ ವೈನ್ಸ್ ಬಳಿ ಗಲಾಟೆ ಮಾಡಿದ್ದಾರೆ. ಅದೇ ಗ್ರಾಮದ ನಾಲ್ಕೈದು ಯುವಕರು ಬಾರ್ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಾರ್ ಕ್ಯಾಷಿಯರ್ ರಾಜಣ್ಣ ಮತ್ತು ದೀಪು ಮೇಲೆ ಬಾರ್ ಮೇಲೆ ಕಲ್ಲು ತೂರಿ, ಬಾಟಲ್​ನಿಂದ ಹಲ್ಲೆ ಮಾಡಿದ್ದಾರೆ.

ಹಲ್ಲೆ ನಡೆಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಂಗನೂರು ಗ್ರಾಮದ ಗಿರಿ, ಕೀರ್ತಿ, ಮನು, ಕೃಷ್ಣ, ಅಭಿ ಎಂಬುವವರು ದಾಂಧಲೆ ಮಾಡಿದ್ದಾರೆ. ದಾಂಧಲೆ ನಡೆಸಿ ಪುಂಡರು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version