Site icon PowerTV

ಪಾಪ.. ಅಡ್ವಾನಿ ಬಿಜೆಪಿ ಕಟ್ಟಿ ಕಟ್ಟಿ ಸತ್ತ, ಮೋದಿ ಪ್ರಧಾನಿಯಾದ : ರಾಯರೆಡ್ಡಿ

ಕೊಪ್ಪಳ : ಪಾಪ.. ಅಡ್ವಾನಿ ಬಿಜೆಪಿ ಕಟ್ಟಿ ಕಟ್ಟಿ ಸತ್ತ, ನರೇಂದ್ರ ಮೋದಿ ಬಂದು ಪ್ರಧಾನಿಯಾದ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಲಘುವಾಗಿ ಮಾತನಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಕಕನೂರ ತಾಲೂಕಿನ ತಳಕಲ್ ಗ್ರಾಮದ ಜನಸಂರ್ಪಕ ಸಭೆಯಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ.

ಅವರಪ್ಪಂದಿರ ಜೊತೆ ನಾನು ಕೆಲಸ‌ ಮಾಡಿದವನು. ಇವರು ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡಾಡ್ತಾರೆ. ದೇವೆಗೌಡರ ಕ್ಯಾಬಿನೆಟ್​ನಲ್ಲಿ ಮಿನಿಸ್ಟರ್ ಆಗಿದ್ದವನು ನಾನು. ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋಕು ಹೆದರುತ್ತಿದ್ದ. ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಏನು ನಿದ್ದೆ ಮಾಡ್ತಾ ಇದ್ದಾರ? : ಹೆಚ್.ಸಿ ಬಾಲಕೃಷ್ಣ

ಸಿದ್ದರಾಮಯ್ಯನವರನ್ನ ನೋಡಿ

ನೀವು ದುಖಃ ಪಡುವ ಅಗತ್ಯವಿಲ್ಲ, ಒಮ್ಮೊಮ್ಮೆ ಮಂತ್ರಿಯಾಗೋಕೆ ಆಗೋಲ್ಲ. ಅದಕ್ಕೆ ಹಣೆ ಬರಹ ಬೇಕು. ನಮ್ಮ ಸಿದ್ದರಾಮಯ್ಯನವರನ್ನ ನೋಡಿ. ಕಾಂಗ್ರೆಸ್​ಗೆ ಬಂದು ಎರಡು ಬಾರಿ ಸಿಎಂ ಆದ್ರು. ಕಾಂಗ್ರೆಸ್​ನ ಹಳೇ(ಮೂಲ) ಮಂದಿ ಏನಂತಿರಬಹುದು. ಇದೆಲ್ಲಾ ಮನುಷ್ಯನ ಅದೃಷ್ಟ. ನಮ್ಮ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version