Site icon PowerTV

ಸಿಎಂ ನನ್ಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡೋಕೆ ರೆಡಿ ಇದ್ರು : ಬಸವರಾಜ ರಾಯರೆಡ್ಡಿ

ಕೊಪ್ಪಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನಗೆ ಸಚಿವ ಸಂಪುಟ ದರ್ಜೆ ಸ್ಥಾನ ನೀಡುವುದಕ್ಕೆ ಸಿದ್ಧರಾಗಿದ್ದರು ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ನೀಡುತ್ತೇನೆ ಅಂದಿದ್ದರು. ನಾನೇ ಬೇಡ ಅಂದಿದ್ದೇನೆ ಎಂದು ತಿಳಿಸಿದ್ದಾರೆ.

ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ನನಗೇನು ಬೇಜಾರಗಿಲ್ಲ. ಸಚಿವ ಸ್ಥಾನದ ಅವಶ್ಯಕತೆಯೂ ಇಲ್ಲ, ಮುಂದೆ ಮಂತ್ರಿ ಮಾಡೋದು ಕೂಡ ಬೇಡ. ಈ ಬಗ್ಗೆ ಬೇಕಾದ್ರೆ ಬರೆದುಕೊಡುತ್ತೇನೆ. ನಮಗೆ ಯಾವುದೇ ಬೇಜಾರಿಲ್ಲ. ಬಿ.ಆರ್ ಪಾಟೀಲ್ ಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಬೇಜಾರಿಲ್ಲ. ಅವರಿಗೆ ಗೌರವ ಸಿಕ್ತಿಲ್ಲ ಅಂತ ಬೇಜಾರಿದೆ ಎಂದು ಹೇಳಿದ್ದಾರೆ.

ಅಜಯ್ ಸಿಂಗ್ ಕೂಡ ಸಹಿ ಮಾಡಿದ್ರು

ಸಿಎಂಗೆ ಪತ್ರ ಬರೆದಿದ್ದು ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯ ಆಗಲಿ ಅಂತ. ಕಲಬುರ್ಗಿಯಲ್ಲಿ ಬಿ.ಆರ್ ಪಾಟೀಲ್ ಪ್ರಿಯಾಂಕ್ ಖರ್ಗೆ ಮಧ್ಯೆ ಸಮನ್ವಯ ಕೊರತೆಯಾಗಿರಬಹುದು. ಅದು ನಂಗೆ ಗೊತ್ತಿಲ್ಲ. ಶಾಸಕ ಅಜಯ್ ಸಿಂಗ್ ಅವರೂ ಸಹಿ ಮಾಡಿದ್ರು ಎಂದು ಮಾಹಿತಿ ನೀಡಿದ್ದಾರೆ.

Exit mobile version